ಧರ್ಮಸ್ಥಳ ಸಂಸ್ಥೆಯಿಂದ ಸಾಂಸ್ಕೃತಿಕ ಜಾಗೃತಿ

web4
ಪಾರಿಶ್ವಾಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ವಿಠ್ಠಲ ಹಲಗೇಕರ ಚಾಲನೆ ನೀಡಿದರು. ಸುಭಾಷ ಗುಳಶೆಟ್ಟಿ , ಶಾಂಭವಿ ಶಾಂಡಿಲೇಶ್ವರಮಠ ಇತರರಿದ್ದರು.
Published on

ಇಟಗಿ: ಗ್ರಾಮೀಣ ಭಾಗದಲ್ಲಿ ಹಲವು ಪ್ರಗತಿಪರ ಯೋಜನೆಗಳ ಮೂಲಕ ಜನತೆಯಲ್ಲಿ ಆರ್ಥಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಉಂಟುಮಾಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪಾತ್ರ ಮುಖ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಪಾರಿಶ್ವಾಡ ಗ್ರಾಮದ ದಾನಮ್ಮ ದೇವಿ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಕಾರಯುತ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಕೊಡುಗೆ ಅಪಾರ ಎಂದರು.\

ಪಾರಿಶ್ವಾಡ ಹನಿವೆಲ್ ಇಂಟರ್‌ನ್ಯಾಷನಲ್ ಶಾಲೆ ಅಧ್ಯಕ್ಷ ಸುಭಾಷ ಗುಳಶೆಟ್ಟಿ, ಚಿಂತಕಿ ಶಾಂಭವಿ ಶಾಂಡಿಲೇಶ್ವರಮಠ ಮಾತನಾಡಿದರು. ಹಿರೇಮುನವಳ್ಳಿ ಪಾರಿಶ್ವಾಡ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಶ್ರೀ, ಗಣಪತಿ ನಾಯಕ, ವಸಂತ ಸಾಲಿಯಾನ, ಮಲ್ಲಿಕಾರ್ಜುನ ವಾಲಿ, ಗಿರೀಶ ಗಂದಿಗವಾಡ, ಅರುಣ ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net