ಧರ್ಮಸ್ಥಳ ಸಂಸ್ಥೆ ಕಾರ್ಯಕ್ರಮ ಮಾದರಿ

2Itagi1
Published on

ಇಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮ ಮಾದರಿಯಾಗಿವೆ ಎಂದು ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ ಹೇಳಿದರು.

ಗ್ರಾಮದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ(ಧಾರವಾಡ) ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ 6 ದಿನಗಳ ಬಟ್ಟೆ ಬ್ಯಾಗ್ ತಯಾರಿಕೆ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

30 ಸಂಘದ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು. ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಸಾಣಿಕೊಪ್ಪ, ಜ್ಞಾನ ವಿಕಾಸ ತರಬೇತಿ ಸಂಸ್ಥೆ

ಪ್ರೊ.ಜ್ಯೋತಿ ಬ್ಯಾಹಟ್ಟಿ, ಸಮನ್ವಯಾಧಿಕಾರಿ ಲಕ್ಷ್ಮೀ ಕಮಡೊಳ್ಳಿ, ಜ್ಯೋತಿ ಪುಂಡಿ, ಶಿವಲೀಲಾ ಲದ್ದಿಮಠ, ಪವಿತ್ರ ಬಲಗೊಂಡ, ವಲಯ ಮೇಲ್ವಿಚಾರಕ ಪ್ರಕಾಶ ನಾಯ್ಕ ಇತರರಿದ್ದರು. ರುದ್ರಮ್ಮ ಶಹಾಪುರಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net