ಅಭಿವೃದ್ಧಿ ಧ್ಯೋತಕ ಧರ್ಮಸಿಂಗ್

2412 KLB 07
Published on

ಕಲಬುರಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸರ್ವಧರ್ಮ ಸಮನ್ವಯಕಾರರಾಗಿದ್ದರು. ಕಕ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಾಜಿ ಸಿಎಂ ಧರ್ಮಸಿಂಗ್ ಜಯಂತಿ ನಿಮಿತ್ತ ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಧರ್ಮಪ್ರಜೆ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಒತ್ತು ನೀಡಿ ಪ್ರೋತ್ಸಾಹಿಸಿದ್ದಾರೆ ಎಂದರು. ನೇತ್ರ ತಜ್ಞೆ ಡಾ.ರಾಜಶ್ರೀ ರೆಡ್ಡಿ ಮಾತನಾಡಿ, ಜನ್ಮ ಕೊಟ್ಟ ಊರನ್ನೇ ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಅದನ್ನು ಇತಿಹಾಸದ ಪುಟ ಸೇರುವಂಥೆ ಮಾಡಿದ ಎನ್.ಧರ್ಮಸಿಂಗ್ ಸರಳ ವ್ಯಕ್ತಿಯಾಗಿ, ಅಭಿವೃದ್ಧಿಗೈದರು ಎಂದರು. ಪ್ರತಿಷ್ಠಾನದ ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ ಮಾತನಾಡಿ, ಧರ್ಮಸಿಂಗ್ ರಾಜಕೀಯ ರಂಗದಲ್ಲಿ ಮಾಡಿದ ಸೇವೆ ಸ್ಮರಣೀಯವಾದದ್ದು. ಅವರ ಹೆಸರಿನಲ್ಲಿ ಧರ್ಮಪ್ರಜೆ ಪ್ರಶಸ್ತಿ ನೀಡಿ, ಆದರ್ಶಗಳನ್ನು ಮುಂದುವರಿಸಲಾಗುತ್ತಿದೆ ಎಂದರ. ಸAಶೋಧಕ ಮುಡಬಿ ಗುಂಡೇರಾವ ಮಾತನಾಡಿದರು. ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಧರ್ಮಪ್ರಜೆ' ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ್ ತಿಳಗೂಳ, ಸಂಚಾಲಕ ಶಿವರಾಜ ಅಂಡಗಿ, ಪ್ರಮುಖರಾದ ಗುರಣ್ಣಾ ಪಡಶೆಟ್ಟಿ ಉಡಚಣ, ಎಸ್.ಕೆ.ಬಿರಾದಾರ, ಮಂಜುನಾಥ ಕಂಬಾಳಿಮಠ, ಚನ್ನಮಲ್ಲಯ್ಯ ಹಿರೇಮಠ ಇತರರಿದ್ದರು.
ಡಾ.ಎನ್.ಧರ್ಮಸಿಂಗ್ ಅವರ ಒಡನಾಡಿಗಳಾದ ಭೀಮರಾಯಗೌಡ ಬಿರಾದಾರ ಮಾಗಣಗೇರಾ, ಅಹ್ಮದ್ ಪಟೇಲ್ ಬಣಮಗಿ, ಮೈಲಾರಿ ಹೊನಗುಂಟಿ ಗುಡೂರ್, ಹೊನ್ನಪ್ಪ ಹೊನ್ನಕೇರಿ ಕೋಳಕೂರ, ಶರಣಪ್ಪ ದೊಡ್ಮನಿ ಕರಕಿಹಳ್ಳಿ, ಗುಂಡಪ್ಪ ನಾಟೀಕಾರ ನೆಲೋಗಿ ಅವರಿಗೆ ಧರ್ಮಪ್ರಜೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಾವಿದ ಮಹೇಶ ಚಿಂತನಪಳ್ಳಿ ಸಂಗೀತ ಪ್ರದರ್ಶನ ನೀಡಿದರು. ಪ್ರಮುಖರಾದ ಧರ್ಮಣ್ಣ ಧನ್ನಿ, ಡಾ.ಬಾಬುರಾವ ಶೇರಿಕಾರ, ರಾಜೇಂದ್ರ ಮಾಡಬೂಳ, ಜೆ.ಎಸ್.ವಿನೋದಕುಮಾರ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ್ ಜವಳಿ, ಶಿವಶರಣಪ್ಪ ಕೋಬಾಳ, ಎಂ.ಎನ್.ಸುಗAಧಿ, ಎಸ್.ಎಂ.ಪಟ್ಟಣಕರ್, ಎಚ್.ಎಸ್.ಬರಗಾಲಿ, ವಿಶ್ವನಾಥ ಪಾಟೀಲ್ ಗೌನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net