ತಂದೆ- ತಾಯಿ ಮಕ್ಕಳ ಭವಿಷ್ಯ ರೂಪಿಸುವ ಮಹಾತ್ಯಾಗಿಗಳು

22 Dwd 2
????????????
Published on

ಧಾರವಾಡ: ತಂದೆ- ತಾಯಿ ನಮ್ಮ ಕಣ್ಣಿಗೆ ಕಾಣುವ ಜೀವಂತ ದೇವರು. ಮಕ್ಕಳ ಉತ್ತಮ ಭವಿಷ್ಯಕ್ಕೆ ಎಲ್ಲವನ್ನೂ ತ್ಯಾಗ ಮಾಡುವ ಮಹಾತ್ಯಾಗಮಯಿಗಳು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ದಿ. ಧರಮಪ್ಪ ದೊಡ್ಡವೀರಪ್ಪ ಹೊರಕೇರಿ ದತ್ತಿ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಜನಪದ ಸಾಹಿತ್ಯದಲ್ಲಿ ಅವ್ವ- ಅಪ್ಪ' ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಜನಪದ ಸಾಹಿತ್ಯದಲ್ಲಿ ಕೌಟುಂಬಿಕ ಸಂಬAಧಗಳನ್ನು ಗಟ್ಟಿಗೊಳಿಸುವ ಹಾಗೂ ಮೌಲ್ಯಗಳನ್ನು ಬಿತ್ತುವ ಸಾಮರ್ಥ್ಯಗಳಿವೆ. ದುರ್ದೈವ ಎಂದರೆ ಜಾಗತೀಕರಣದ ಪ್ರಭಾವದಿಂದ ಸಂಬAಧಗಳು ಹದಗೆಟ್ಟಿವೆ. ನಮ್ಮೆಲ್ಲರ ಶಿಕ್ಷಣ ಹಾಗೂ ರಕ್ಷಣೆಯ ಹೊಣೆ ಹೊತ್ತ ತಂದೆ- ತಾಯಿಯ ಋಣ ತೀರಿಸುವುದು ಅಸಾಧ್ಯ. ಅವರನ್ನು ತಿರಸ್ಕರಿಸುವ ಮಕ್ಕಳು ಉನ್ನತ ಸ್ಥಾನದಲ್ಲಿದ್ದರೂ ನಿಷ್ಪ ್ರಯೋಜಕ ಎಂದರು.
ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ ಮಾತನಾಡಿ, ದಿ. ಧರಮಪ್ಪ ಹೊರಕೇರಿ ಹಾಗೂ ಅವರ ಪತ್ನಿ ಮಕ್ಕಳ ಶ್ರೇಯೋಭಿಲಾಸೆಗಾಗಿ ತ್ಯಾಗ ಮಾಡಿದ ಪುಣ್ಯವಂತರು. ಅವರ ತ್ಯಾಗ ಸ್ಮರಣೀಯ ಎಂದರು.
ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿ, ದಿ. ಧರಮಪ್ಪ ಹೊರಕೇರಿ ಆದರ್ಶ ಶಿಕ್ಷಕ ಮಾತ್ರವಲ್ಲ. ಉತ್ತಮ ಬೋಧಕರು, ಪಾಲಕರೂ ಆಗಿದ್ದರು. ಅವರ ಬದುಕಿನ ಮಾರ್ಗ ಇಂದಿನವರಿಗೆ ಅನುಕರಣೀಯ ಎಂದರು.
ದತ್ತಿದಾನಿಗಳ ಪರವಾಗಿ ಡಾ. ಲಿಂಗರಾಜ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ತಜ್ಞ ಡಾ. ರಾಮು ಮೂಲಗಿ ತಾಯಿಯ ಕುರಿತು ಜನಪದ ಗೀತೆ ಹಾಡಿದರು.
ಸತೀಶ ತುರಮರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಕಾರ್ಯಕ್ರಮ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಡಾ. ಮಹೇಶ ಹೊರಕೇರಿ, ಶಿವಾನಂದ ಭಾವಿಕಟ್ಟಿ, ಸುರೇಶ ಹೊರಕೇರಿ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಮಧುಮತಿ ಸಣಕಲ್, ಶಾಂತವೀರ ಬೆಟಗೇರಿ, ರಾಜೇಂದ್ರ ಸಾವಳಗಿ, ಕೆ.ಎಂ. ಅಂಗಡಿ, ರತ್ನಮ್ಮ ಹೊರಕೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net