ಸತ್ಯಮಾರುತಿ ದೇವಸ್ಥಾನದಲ್ಲಿ ಧನ್ವಂತರಿ ಹೋಮ

ಸಿಂಧನೂರು ಪಿಡಬ್ಲು ್ಯಡಿ ಕ್ಯಾಂಪ್‌ನ ಸತ್ಯಮಾರುತಿ ದೇವಸ್ಥಾನದಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವದ ನಿಮಿತ್ತ ಪಂಡಿತ ರಾಮಬಾಬು ಶರ್ಮ ಅವರು ಧನ್ವಂತರಿ ಹೋಮ ನೆರವೇರಿಸಿದರು.
ಸಿಂಧನೂರು ಪಿಡಬ್ಲು ್ಯಡಿ ಕ್ಯಾಂಪ್‌ನ ಸತ್ಯಮಾರುತಿ ದೇವಸ್ಥಾನದಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವದ ನಿಮಿತ್ತ ಪಂಡಿತ ರಾಮಬಾಬು ಶರ್ಮ ಅವರು ಧನ್ವಂತರಿ ಹೋಮ ನೆರವೇರಿಸಿದರು.
Published on

ಸಿಂಧನೂರು: ನಗರದ ಪಿಡಬ್ಲು ್ಯಡಿ ಕ್ಯಾಂಪ್‌ನ ಸತ್ಯಮಾರುತಿ ದೇವಸ್ಥಾನದಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಗ್ಗೆ ವಾಯುಸ್ತುತಿ ಪುನಃಶ್ಚರಣ, ಚರಮಶ್ಲೋಕ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಲಾಯಿತು. ನಂತರ ಪಂಡಿತ ರಾಮಬಾಬು ಶರ್ಮ ಅವರು ಧನ್ವಂತರಿ ಹೋಮ, ಪಂಡಿತ ಪಾಂಡುರಂಗ ಆಚಾರ್ ಕನಸಾವಿ ಅವರಿಂದ ಜಯತೀರ್ಥರ ಕುರಿತ ವಿಶೇಷ ಉಪನ್ಯಾಸ ನಡೆಯಿತು.

ಉತ್ತರಾಧಿಮಠದ ಮಠಾಧಿಕಾರಿ ವೆಂಕಟಗಿರಿ ಆಚಾರ್, ಪ್ರಮುಖರಾದ ಎಂ.ಕೆ.ಗೌರಕರ್, ಮನೋಹರರಾವ್ ಕುಲಕರ್ಣಿ, ಗುರುರಾಜ ಆಳ್ದಾಲ್, ಪಾಂಡುರಂಗ ದೇಸಾಯಿ, ಸತ್ಯನಾರಾಯಣರಾವ್ ಕುಲಕರ್ಣಿ, ಜಿ.ವಿ.ಜೋಷಿ, ಪ್ರಹ್ಲಾದ ಗುಡಿ, ವಾದಿರಾಜ, ಕೃಷ ್ಣಮೂರ್ತಿ ಇತರರಿದ್ದರು.

ರಾಘವೇಂದ್ರಸ್ವಾಮಿಗಳ ಮಠ: ಸಿಂಧನೂರು ಹಾಗೂ ತುರ್ವಿಹಾಳದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಜಯತೀರ್ಥರ ಆರಾಧನಾ ಮಹೋತ ್ಸವದ ನಿಮಿತ್ತ ಹೋಮ ಹಾಗೂ ರಥೋತ ್ಸವ ಜರುಗಿತು. ಮಠದ ವಿಚಾರಣಕರ್ತ ರಾಘವೇಂದ್ರರಾವ್ ಕುಲಕರ್ಣಿ, ಅರ್ಚಕ ನವೀನಾಚಾರ್, ಮಠಾಧಿಕಾರಿ ನರಸಿಂಹಾಚಾರ್, ಪ್ರಮುಖರಾದ ನಾಗೇಂದ್ರ ಕುಮಾರ ಸಾಹುಕಾರ, ಶೇಷಗಿರಿರಾವ್ ಕುಲಕರ್ಣಿ, ಶ್ರೀಧರ ಕುಲಕರ್ಣಿ, ರಾಘವೇಂದ್ರರಾವ್ ದಢೇಸುಗೂರು, ಜಯತೀರ್ಥದಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net