ವಿಜೃಂಭಣೆಯ ಧನುರ್ಮಾಸ ರಥೋತ್ಸವ

20kls1
Published on

ಕಳಸ: ಇಲ್ಲಿಯ ಕಲಶೇಶ್ವರ ಸ್ವಾಮಿಯ ಧನುರ್ಮಾಸ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಗಣಪತಿ ಪೂಜೆ ಆದಿವಾಸ ಹೋಮದೊಂದಿಗೆ ಧನುರ್ಮಾಸದ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡು ಮಧ್ಯಾಹ್ನ ಶ್ರೀಮನ್ಮಹಾ ಧನುರ್ಮಾಸ ರಥಾರೋಹಣ ನಡೆಯಿತು. ಕಲಶೇಶ್ವರನ ಉತ್ಸವ ಮೂರ್ತಿಯನ್ನು ಚಿಕ್ಕ ರಥದಲ್ಲಿ ಕುಳ್ಳಿರಿಸಿ ಕಲಶೇಶ್ವರ ದೇವಸ್ಥಾನದಿಂದ ರಥ ಬೀದಿಯ ಮಂಜಿನಕಟ್ಟೆಯವರೆಗೆ ರಥೋತ್ಸವ ಮಾಡಿ ನಂತರ ಮತ್ತೆ ಕಲಶೇಶ್ವರ ದೇವಸ್ಥಾನಕ್ಕೆ ರಥವನ್ನು ತರಲಾಯಿತು. ರಥ ಬೀದಿಯ ಉದ್ದಕ್ಕೂ ಭಕ್ತಾಧಿಗಳು ದೇವರಿಗೆ ಹಣ್ಣು, ಕಾಯಿ ಸಮರ್ಪಿಸಿ ಹರಕೆ ತೀರಿಸಿಕೊಂಡರು.

ಕಳಸ ಸುತ್ತಮುತ್ತಲಿನ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಂಕುಮೋತ್ಸವ, ಕೋಟಿ ತೀರ್ಥದಲ್ಲಿ ಅವಬೃತ ಸ್ನಾನ,ಸಂಪ್ರೋಕ್ಷಣೆಯೊಂದಿಗೆ ಧನುರ್ಮಾಸ ರಥೋತ್ಸವ ಕಾರ್ಯಕ್ರಮ ಕೊನೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net