ಜಿಗಣೇಹಳ್ಳಿಯಲ್ಲಿ ಧಾನ ಶಾಸನ ಪತ್ತೆ

20KDR5
ಕಡೂರಿನ ಜಿಗಣೇಹಳ್ಳಿ ಯ ಶಾಲಾ ಆವರಣದಲ್ಲಿರುವ ಹೊಯ್ಸಳ ಇಮ್ಮಡಿ ವೀರಬಲ್ಲಾಳನ ಕಾಲದ ಅಪ್ರಕಟಿತ ದಾನ ಶಾಸನ.
Published on

ಕಡೂರು: ತಾಲೂಕಿನ ಜಿಗಣೇಹಳ್ಳಿ ಗ್ರಾಮದಲ್ಲಿ ಹೊಯ್ಸಳ ಇಮ್ಮಡಿ ವೀರಬಲ್ಲಾಳನ ಕಾಲದ ಅಪ್ರಕಟಿತ ದಾನ ಶಾಸನವೊಂದನ್ನು ಶಾಸನ ತಜ್ಞ ಹಿರೇನಲ್ಲೂರು ಪಾಂಡುರಂಗ ಸಂಶೋಧಿಸಿದ್ದಾರೆ.
ಇದೊಂದು ದಾನ ಶಾಸನವಾಗಿದ್ದು, ಸೂರ್ಯ ಗ್ರಹಣದ ದಿನನಕರದ ಹಳ್ಳಿಯ ಗೌತಮೇಶ್ವರ ದೇವರಿಗೆ ಅಂಗಭೋಗ, ರಂಗಭೋಗ ಸೇವೆಗಳು ಮತ್ತು ದೇವಾಲಯದ ಜೀರ್ಣೋದ್ಧಾರದ ವೆಚ್ಚಕ್ಕಾಗಿ ಕೆರೆ ಕೆಳಗಿನ ಗದ್ದೆ ಮತ್ತು ದೇವಾಲಯದ ಮುಂದಿನ ಬೆದ್ದಲು ಭೂಮಿಯನ್ನು ದೇವಾಲಯದ ಸ್ಥಾನಿಕ ಯತಿಗಳಿಗೆ ನೀಡಿದ ವಿವರಗಳಿವೆ.
ಶಾಸನದಲ್ಲಿ ಸ್ಥಳೀಯ ವರ್ತಕನಾಗಿದ್ದಿರಬಹುದಾದ ಬೆಕ್ಕನಹಳ್ಳಿಯ ಮಾಚಿಸೆಟ್ಟಿ ಮತ್ತು ದೇವಾಲಯದ ಅರ್ಚಕರಾಗಿದ್ದಿರಬಹುದಾದ ಕಾಳಾಮುಖ ಪರಂಪರೆಯ ’ಕಲ್ಲಜೀಯರು ಹೆಸರುಗಳು ಉಲ್ಲೇಖವಾಗಿದೆ. ಇದು 1202ನೇ ಸಾಲಿನ ಶಾಸನವಾಗಿದ್ದು, ಹೊಯ್ಸಳ ಇತಿಹಾಸದ ಪ್ರಮುಖ ಶಾಸನ. ಸಂಶೋಧನೆಗೆ ನೆರವಾದ ಹಿರಿಯ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್‌ಗೆ ಪಾಂಡುರಂಗ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಸ್ತುತ ಈ ಶಾಸನವನ್ನು ಗ್ರಾಮದ ಶಾಲಾವರಣದಲ್ಲಿ ಸಂರಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net