ಆರ್​ಕೆಎಂನಲ್ಲಿ ಧನ ತ್ರಯೋದಶಿ ಆಚರಣೆ

Dhan Trayodashi celebration at RKM
Published on

ವಿಜಯಪುರ : ನಗರದ ಆರ್​ಕೆಎಂ ಆಯುರ್ವೇದ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಧನತ್ರಯೋದಶಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಆಯುರ್ವೇದದ ದೇವತೆ ಧನ್ವಂತರಿ ಭಗವಾನರಿಗೆ ಪೂಜೆ ನೆರವೇರಿಸಲಾಯಿತು.ಪ್ರಾಚಾರ್ಯ ಡಾ. ಸದಾನಂದ ಜಿಗಜಿನ್ನಿ ಮಾತನಾಡಿ, ಧನ ತ್ರಯೋದಶಿಯ ಆಯುರ್ವೇದೀಯ ಮತ್ತು ಸಾಂಸತಿಕ ಮಹತ್ವ ವಿವರಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್​.ಎಂ. ಕರ್ಪೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕರು ಧನ್ವಂತರಿ ಜಯಂತಿಯ ಮಹತ್ವ ಮತ್ತು ಆಯುರ್ವೇದದ ಪುರಾತನ ಪಂಡಿತರ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮಗಳ ನಡೆದವು. ನಂತರ ಪ್ರಸಾದ ವಿತರಣೆ ನಡೆಯಿತು.

ವಿಜಯಪುರದ ಆರ್​ಕೆಎಂ ಆಯುರ್ವೇದ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಧನ ತ್ರಯೋದಶಿ ಹಬ್ಬ ಆಚರಿಸಲಾಯಿತು. ಡಾ. ಸದಾನಂದ ಜಿಗಜಿನ್ನಿ, ಎಸ್​.ಎಂ. ಕರ್ಪೂರಮಠ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net