ಬೆಂಗಳೂರಿನಲ್ಲಿ ಧಮ್ಮ ಕಾರ್ಯಕ್ರಮ

BP THIPPESWAMY PRINCEPAL HYR
Published on

ಚಿತ್ರದುರ್ಗ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅ.10ರಂದು ಬುದ್ಧಿಸ್ಟ್ ಫ್ರೆಟರ್ನಿಟಿ ಕೌನ್ಸಿಲ್ ನೇತೃತ್ವದಲ್ಲಿ ಅಶೋಕ ಅಂಬೇಡ್ಕರ್ ಧಮ್ಮ ಯಾತ್ರೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಚಿತ್ರದುರ್ಗದಿಂದ ಹೆಚ್ಚಿನ ಜನ ಭಾಗವಹಿಸುವಂತೆ ಭಾರತೀಯ ಬೌದ್ಧ ಮಹಾಸಭಾ ಚಿತ್ರದುರ್ಗ ಶಾಖೆ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

ಯಾತ್ರೆಯೂ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಕಲಾಕ್ಷೇತ್ರ ತಲುಪಲಿದೆ. ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಅವರು ಸಾಮ್ರಾಟ್ ಅಶೋಕನ ವಿಶೇಷ ಪ್ರತಿಮೆ ಅನಾವರಣ ಮಾಡುವರು. ಸಚಿವ ಸತೀಶ್ ಜಾರಕಿಹೊಳಿ, ಬುದ್ಧ ಆ್ಯಂಡ್ ಹಿಸ್ ಧಮ್ಮ ಸಂಪುಟ ಬಿಡುಗಡೆಗೊಳಿಸುವರು. ಸಾಹಿತಿ ಮೂಡ್ನಾಕೂಡ ಚಿನ್ನಸ್ವಾಮಿ, ವೆಂಕಮ್ಮ, ಗೊಲ್ಲಹಳ್ಳಿ ಶಿವಪ್ರಸಾದ್, ಹನಸೋಗೆ ಸೋಮಶೇಖರ ಅವರಿಗೆ ಧಮ್ಮ ಸನ್ಮಾನ ನಡೆಯಲಿದೆ. ಅ.22ಕ್ಕೆ ಯಾತ್ರೆ ಮಹಾರಾಷ್ಟ್ರದ ನಾಗಪುರ ತಲುಪಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net