

ಕಲಬುರಗಿ: ಜಗತ್ತಿನ ಜ್ಞಾನವನ್ನು ನೀಡಿದ ಬೌದ್ಧ ಧರ್ಮವನ್ನು ತೈಲ್ಯಾಂಡ, ಶ್ರೀಲಂಕಾ, ಚೀನಾ, ಜಪಾನ್ ಸೇರಿ ಹಲವು ರಾಷ್ಟçಗಳು ಒಪ್ಪಿ, ವಿಶ್ವದೆಲ್ಲೆಡೆ ಪಸರಿಸಿದೆ. ಆದರೆ ಭಾರತದಲ್ಲಿ ದಲಿತ ಜಾತಿಗೆ ಬೌದ್ಧ ಧಮ್ಮವನ್ನು ಕಟ್ಟಿ ಹಾಕುವ ಯತ್ನ ನಡೆದಿದ್ದು, ದೇಶದಲ್ಲಿನ ಆರು ಸಾವಿರ ಜಾತಿಗಳ ಜನರು ಮೂಲ ನಾಗ ಬೌದ್ಧರೇ ಆಗಿದ್ದಾರೆ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಡಾ.ಹ.ರಾ.ಮಹೇಶ ಹೇಳಿದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದಿಂದ ಹಮ್ಮಿಕೊಂಡ ೨ ದಿನದ ೬೮ನೇ ಧಮ್ಮ ಚಕ್ರ ಪ್ರವರ್ತನ ದಿನದ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಧಮ್ಮಕ್ರಾಂತಿ ಉತ್ಸವ, ಧಮ್ಮ ದೀಕ್ಷಾ ಸಮಾರಂಭದಲ್ಲಿ ಮಾತನಾಡಿ, ಭಾರತದಲ್ಲಿ ಮೂಲ ನಾಗ ಮತ್ತು ವೈದಿಕ ಜನಾಂಗಗಳಿದ್ದವು. ಅದರಲ್ಲಿ ಬುದ್ಧ, ಅಶೋಕ ನಾಗ ಜನಾಂಗದವರಾಗಿದ್ದರು. ಇಡೀ ದೇಶ ಬೌದ್ಧಮಯವಾಗಿತ್ತು. ಆದರೆ ಬೌದ್ಧರನ್ನು ಜಾತಿಯಾಗಿ ವಿಘಟಿಸಲಾಯಿತು. ಲಿಂಗಾಯತ, ಕೋಲಿ, ಕುರುಬ, ಎಸ್ಸಿ ಸೇರಿ ಎಲ್ಲರೂ ಬೌದ್ಧರೇ ಆಗಿದ್ದರು ಎಂದು ಹೇಳಿದರು.
ಬಿಜೆಪಿ ಮುಖಂಡ ಆರ್.ರುದ್ರಯ್ಯ ಮಾತನಾಡಿ, ರಾಜ್ಯದಲ್ಲಿ ಹಲವು ಪ್ರಯತ್ನ ನಡೆದರೂ ಬೌದ್ಧರ ಸಂಖ್ಯೆ ಕ್ಷೀಣಿಸುತ್ತಿದೆ. ಸಮಾರಂಭ ಮಾಡಿ ಕೈಬಿಡುತ್ತಿದ್ದು. ಪ್ರಚಾರ ಮುಂದುವರಿಸಬೇಕು. ಸನ್ನತಿ ಬೌದ್ಧ ಸ್ಮಾರಕದ ಪ್ರಾಧಿಕಾರ ನೀರಾವರಿ ಇಲಾಖೆಯಿಂದಲೇ ೨೦೦೪ರಲ್ಲೆ ಆಗಿತ್ತು. ಜಾಮದಾರರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ನಂತರ ಅದಕ್ಕೆ ಅನುದಾನ ನೀಡಲಿಲ್ಲ. ಇದೀಗ ಕಾಲ ಪ್ರಸಕ್ತವಾಗಿದ್ದು, ಧ್ವನಿ ಎತ್ತಬೇಕು. ಸಂಘಟಿತವಾಗಿ ಬಲಿಷ್ಠವಾಗಬೇಕು ಎಂದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ವಿಶ್ವಕ್ಕೆ ಪ್ರಜ್ನಾ ಶೀಲ ಕರುಣೆ ತತ್ವ ಬೋಧಿಸಿದ ಬುದ್ಧನನ್ನು ಅಂಬೇಡ್ಕರ್ ಅನುಸರಿಸಿದರು. ಅಂಬೇಡ್ಕರ್‌ರನ್ನು ನಾವು ಅನುಸರಿಸಿ, ಶಿಕ್ಷಣ ಪಡೆದು, ಸಂಘಟಿತರಾಗಿ ಹೋರಾಟಡಬೇಕು ಎಂದರು.
ಸಂತೋಷ ಮೇಲಿನಮನಿ ಪ್ರಾಸ್ತಾವಿಕ ಮಾತನಾಡಿ, ಸನ್ನತಿಯ ಕನಗನಹಳ್ಳಿಯ ಅಭಿವೃದ್ಧಿ ಪ್ರಾಧಿಕಾರ ಮಾಡಿ, ೫೦೦ ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿದರು.
ತೆಲಂಗಾಣದ ಭಂತೆ ಭೋಧಿ ಧಮ್ಮ, ಮೈಸೂರಿನ ಭಂತೆ ಭೋಧಿ ದತ್ತ ಸಾನ್ನಿಧ್ಯ ವಹಿಸಿದ್ದರು. ಶಿವಶರಣಪ್ಪ ತೊನಸನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಸರಡಗಿ, ಮಹಾಸಭಾ ಅಧ್ಯP್ಷÀ ಸೂರ್ಯಕಾಂತ ನಿಂಬಾಳ್ಕರ, ಸುರೇಶ ಕಾನೆಕರ, ಲಕ್ಷö್ಮಣ ಸೋನ ಕಾಂಬಳೆ, ಹರ್ಷವರ್ಧನ ಕಣ್ಣಿ, ರಮೇಶ ಪಟ್ಟೆದಾರ, ರಾಜಕುಮಾರ ಕಪನೂರ, ಸುನೀಲ ಮಾನಪಡೆ, ಪ್ರಕಾಶ ಔರಾದ್ಕರ, ಗುರಣ್ಣ ಐನಾಪುರ, ರಾಜೀವ ಜಾನೆ, ದಿಗಂಬರ ಬೆಳಮಗಿ, ಸುಂಕಿದ್ರ ತವಾಡೆ, ಸಂತೋಷ ಹಾದಿಮನಿ, ಅಶೋಕ ವೀರನಾಯಕ, ದಿನೇಶ ದೊಡ್ಡಮನಿ, ಸಚಿನ ಶಿರವಾಳ, ದೇವಿಂದ್ರಪ್ಪ ಸಿನೂರು, ಅಶ್ವಿನ ಶಂಕಾ, ಶರಣು ದೊಡ್ಡಮನಿ, ಜೈ ಭಾರತ ಕಾಂಬಳೆ, ಶಾಂತಪ್ಪ ಕೋಡ್ಲಿ ಜೇವರ್ಗಿ, ಅಶೋಕ ಬಬಲಾದ, ರಮೇಶ ಬೆಳಕೋಟಿ ಕಮಲಾಪುರ, ಕಿಶೋರ ಗಾಯಕವಾಡ, ಸಿದ್ಧಾರ್ಥ ಸಾಳಂಕೆ, ಪ್ರಕಾಶ ಮಾಲಗೆ, ಅನೀಲ ಟೆಂಗಳಿ, ಪಂಡಿತ ಮದಗುಣಕಿ ಇತರರಿದ್ದರು. ದಯಾನಂದ ದೊಡ್ಡಮನಿ ಸ್ವಾಗತಿಸಿದರು. ಡಾ.ಎಂ.ಬಿ.ಕಟ್ಟಿ ನಿರೂಪಣೆ ಮಾಡಿದರು.