ಧಗ್ರಾಯೋ ಕಚೇರಿ ಕಟ್ಟಡ ಶುದ್ಧಿಗೆ ಹವನ

KMT Dharmasthala
Published on

ಕುಮಟಾ: ಪಟ್ಟಣದ ಪೈರಗದ್ದೆ ರಸ್ತೆಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಾಲಯದಲ್ಲಿ ಸಂಪ್ರದಾಯದಂತೆ ವಾರ್ಷಿಕ ಪೂಜೆ, ಹವನಗಳನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಪ್ರಬಂಧಕ ಲಿಜಯ್ ಚಾಲನೆ ನೀಡಿದರು. ಬಳಿಕ ಸಾಲಂಕೃತ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ, ನೈವೇದ್ಯ ಸಮರ್ಪಿಸಲಾಯಿತು. ಕಟ್ಟಡದ ಆಧ್ಯಾತ್ಮಿಕ ಶುದ್ಧಿಗಾಗಿ ಹವನ ಮಾಡಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಯೋಗಾನಂದ ಗಾಂಧಿ, ಮದ್ಯವರ್ಜನ ಶಿಬಿರದ ಅಧ್ಯಕ್ಷ ವಾಸುದೇವ ನಾಯ್ಕ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಪ್ರಬಂಧಕ ಗಣೇಶ, ಬ್ಯಾಂಕ್ ಸಿಬ್ಬಂದಿ ಮಾರುತಿ, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕಲ್ಮೇಶ ಎಂ., ಹಣಕಾಸು ಪ್ರಬಂಧಕಿ ಭಾರತಿ, ನಾಗರತ್ನಾ ಹಾಗೂ ವಿವಿಧ ವಲಯದ ಮೇಲ್ವಿಚಾರಕರಾದ ಕೇಶವ, ಮಂಜುನಾಥ, ದಿನೇಶ, ಮಾದೇವ, ನಾಗಪ್ಪ, ಸರೋಜಾ, ವೀಣಾ, ಸುನೀಲ, ಚಾಲಕ ಲಕ್ಷ್ಮಣ, ಕಚೇರಿ ಸಿಬ್ಬಂದಿ ಮಂಜುನಾಥ, ಮಹೇಶ, ಶಿಲ್ಪಾ, ಸುಮಾ, ಸುಶೀಲಾ, ಸುಜಾತಾ, ಸುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net