ಡಿಜಿ ಫೋಟೋ ಎಕ್ಸಪೋ,  ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ಆಯೋಜನೆ

IMG_20250123_112217_317.jpg
Published on

ಹುಬ್ಬಳ್ಳಿ: ಇಲ್ಲಿಯ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ವಿಡಿಯೋಗ್ರಾಫರ್ಸ್ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಬೈ ಆ್ಯಂಡ್ ಸೆಲ್ ಇಂಟರಾಕ್ಶನ್  ಪ್ರೈವೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಜ. 25ರಿಂದ ಎರಡು ದಿನಗಳವರೆಗೆ ನಗರದ ಗೋಕುಲ ರಸ್ತೆ ವಾಸವಿ ಮಹಲ್ ನಲ್ಲಿ 7ನೇ ರಾಷ್ಟ್ರ ಮಟ್ಟದ ಛಾಯಾಗ್ರಾಹಕರ ಛಾಯಾ ವಸ್ತು ಪ್ರದರ್ಶನ ಮತ್ತು ಡಿಜಿ ಫೋಟೋ ಎಕ್ಸಪೋ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಸಂಘದ ಅಧ್ಯಕ್ಷ ಕಿರಣ ಬಾಕಳೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 25ರಂದು ಬೆಳಗ್ಗೆ 11ಕ್ಕೆ ಸಚಿವ ಸಂತೋಷ ಲಾಡ್ ಪ್ರದರ್ಶನಕ್ಕೆ ಚಾಲನೆ ನೀಡುವರು. ಶಾಸಕ ಅರವಿಂದ ಬೆಲ್ಲದ ಉಪಸ್ಥಿತರಿರುವರು ಎಂದರು.

ಪ್ರದರ್ಶನಕ್ಕಾಗಿ ದೇಶದ ವಿವಿಧೆಡೆಗಳಿಂದ ಬರುವ ಕಂಪನಿಗಳ 70 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವಿವಿಧ ರೀತಿಯ ಕ್ಯಾಮರಾಗಳು, ಅತ್ಯುತ್ತಮ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಶೇಷವಾಗಿ ಸೋನಿ ಡಿಜಿಟಲ್, ನ್ಯಾಶನಲ್ ಪಾನಸಾನಿಕ್, ನಿಕಾನ್, ಪ್ಯೂಜಿ ಫಿಲ್ಂ, ಷಾಡೋ ಕಂಪನಿಗಳು ಭಾಗವಹಿಸಲಿವೆ ಎಂದರು.

ಪ್ರಶಸ್ತಿ ಪ್ರದಾನ:
ಉತ್ತರ ಕರ್ನಾಟಕ ಹಿರಿಯ ಛಾಯಾಗ್ರಾಹಕರಾದ ನಾಗೇಂದ್ರಸಾ ಪೂಜಾರಿ, ಕೃಷ್ಣಸಾ ಪಟ್ಟಣ, ರವೀಂದ್ರ ಕಾಟೀಗರ, ಭರತ ದಲಬಂಜನ, ಕಿಶೋರ ಮಗಜಿ, ಪ್ರಭಾಕರ ಕಲಬುರ್ಗಿ, ಯಲ್ಲಪ್ಪ ಶಿಂಗ್ರಿ, ನಿಂಗಪ್ಪ ಉಗರಗೋಳ, ಅಶೋಕ ಬಡಿಗೇರ, ಉಮೇಶ ನಿಂಬಾಳಕರ, ಸಂತೋಷ ಖಿರೋಜಿ, ರವಿ ಕೋಪರ್ಡೆ, ರಾಜೇಶ ನಂದಿ, ಮಹ್ಮದ್ ಅಸ್ಲಂ ಖೋಜೆ, ಬಸವರಾಜ ಶೀಲವಂತ ಅವರಿಗೆ ಉತ್ತರ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಎರಡು ದಿನಗಳ ಮೇಳದಲ್ಲಿ ಉತ್ತರ ಕರ್ನಾಟಕ ಭಾಗದ ಛಾಯಾಗ್ರಾಹಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಐ ಬಡ್ಡಿ ಕಣ್ಣಿನ ಆಸ್ಪತ್ರೆ ಹಾಗೂ ಸುಶ್ರೂತಾ ಆಯುರ್ವೇದಿಕ್ ಆಸ್ಪತ್ರೆ, ಉನ್ನತಿ ಡೈಗ್ನೋಸ್ಟಿಕ್ ಸ್ಕಾನ್ ಆಶ್ರಯದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಹುಲಿಬೆಲೆ ತಿಳಿಸಿದರು.

ಹುಬ್ಬಳ್ಳಿ ಸಂಘದ ಉಪಾಧ್ಯಕ್ಷ ದಿನೇಶ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟೀಗರ, ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net