

ವಿಜಯಪುರ: ನಗರದ ಝೆಂಡಾ ಕಟ್ಟಿ ಹಳಕೇರಿ ಗಲ್ಲಿಯ ಗಾಯಿ ಚಾಳ್ ಬಳಿಯ ಶ್ರೀ ಪ್ರಸನ್ನೇಶ್ವರ ದೇವಾಲಯದಲ್ಲಿ ಮಾ.26 ರಂದು ಮಹಾಶಿವರಾತ್ರಿ ದಿನ ಸಂಜೆ 6ಕ್ಕೆ 14ನೇ ವರ್ಷದ ಭಕ್ತೀಗಿತೆ ಗಾಯನ ಸ್ಪರ್ಧೆ ನಡೆಯಲಿದೆ.
ಪ್ರಸನ್ನೇಶ್ವರ ಸೇವಾ ಸಮಿತಿ ವತಿಯಿಂದ ದಿ. ಶೈಲಾ ನಾಗೇಶ ಕುಲಕರ್ಣಿ ಸ್ಮರಣಾರ್ಥ ಸ್ಪರ್ಧೆ ಆಯೋಜಿಸಲಾಗಿದೆ. ಹದಿನಾಲ್ಕು ವರ್ಷಗಳಿಂದ ಮಕ್ಕಳಲ್ಲಿ ನಮ್ಮ ಸಂಸತಿ& ಪರಂಪರೆ ಕುರಿತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಹರಿದಾಸರ ಪದಗಳನ್ನಾಧರಿಸಿದ ಭಕ್ತಗಿತೆಗಳನ್ನು ಆಯೋಜಿಸಲಾಗುತ್ತಿದೆ.
ಸ್ಪರ್ಧೆಯಲ್ಲಿ 10 ರಿಂದ 25 ವರ್ಷದೊಳಗಿನವರು ಭಾಗವಹಿಸಬಹುದಾಗಿದೆ. ವಿಜೇತರಿಗೆ ಬಹುಮಾನ ಜತೆಗೆ ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಗುವುದು. ಆಸಕ್ತರು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9632439697ಕ್ಕೆ ಸಂಪರ್ಕಿಸುವಂತೆ ದೇವಾಲಯ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.