ನಿಷ್ಕಲ್ಮಶ ಭಾವದ ಭಕ್ತಿಯಿಂದ ದೇವನೊಲುಮೆ : ಕೆ.ರಾಧಾಕೃಷ್ಣ ನೈಾಕ್ ಬಣ್ಣನೆ

New Project
Published on

ಉಪ್ಪಿನಂಗಡಿ: ನಿಷ್ಕಲ್ಮಶ ಭಾವದೊಂದಿಗೆ ಭಗವಂತನೊಂದಿಗೆ ನಂಬಿಕೆ ಇರಿಸಿದಾಗ ದೇವನೊಲುಮೆ ಅನುಭವಿಸಲು ಸಾಧ್ಯ ಎನ್ನುವುದನ್ನು ಸಾದರಪಡಿಸುವ ಭಕ್ತಿರಥ ಯಾತ್ರೆಯು ಸಮಾಜಕ್ಕೆ ಸತ್ಪ್ರೇರಣೆ ನೀಡಲಿದೆ ಎಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ನೈಾಕ್ ತಿಳಿಸಿದರು.

ಬುಧವಾರ ಉಪ್ಪಿನಂಗಡಿಗೆ ಆಗಮಿಸಿದ ಭಕ್ತಿ ರಥಯಾತ್ರೆಯ ರಥವನ್ನು ಶ್ರೀ ದೇವಾಲಯದ ವಠಾರದಲ್ಲಿ ಸ್ವಾಗತಿಸಿ ಮಾತನಾಡಿದರು.

ಯಾತ್ರೆಯ ಸಂಚಾಲನಾ ಸಮಿತಿಯ ಸದಸ್ಯ ವಿ.ಶಶಾಂಕ್ ಭಟ್ ಮಾತನಾಡಿ, ಹಿಂದು ಸಮಾಜವನ್ನು ಜಾತಿಯ ನೆಲೆಯಲ್ಲಿ ಒಡೆಯಲು ಹಲವಾರು ಶಕ್ತಿಗಳು ಶ್ರಮಿಸುತ್ತಿರುವಾಗ, ನಾವೆಲ್ಲರೂ ಶ್ರೀ ರಾಮತಾರಕ ಮಂತ್ರ ಜಪಿಸಿ ಸಂಘಟಿತರಾಗಿ ರಾಷ್ಟ್ರದ ಪರಂವೈಭವಕ್ಕೆ ಸಾಕ್ಷಿಗಳಾಗೋಣ ಎಂದರು.

ಭಜನೆ ಮೂಲಕ ರಥಯಾತ್ರೆ ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ.ರಮ್ಯ ರಾಜಾರಾಮ್, ದೇವಿದಾಸ್ ರೈ, ವೆಂಕಪ್ಪ ಪೂಜಾರಿ, ಹರೀಶ್ ಉಪಾಧ್ಯಾಯ, ಪ್ರಮುಖರಾದ ನವೀನ್ ನೆರಿಯ, ಮೂಲಚಂದ್ರ ಕಾಂಚನ, ಸುದರ್ಶನ್, ರಾಜಶೇಖರ್ ರೈ, ವೆಂಕಟೇಶ್ ರಾವ್, ಹೇರಂಭ ಶಾಸ್ತ್ರಿ, ಗಂಗಾಧರ ಟೈಲರ್, ಕಂಗ್ವೆ ವಿಶ್ವನಾಥ ಶೆಟ್ಟಿ, ಶ್ರೀನಿಧಿ ಉಪಾಧ್ಯಾಯ, ಶ್ರೀವತ್ಸ ಉಪಾಧ್ಯಾಯ, ಶ್ರೀಪತಿ ತಂತ್ರಿ, ಜಯಂತ ಪೊರೋಳಿ, ವರ್ಣೇಶ್ ಗಾಣಿಗ, ಗುಣಕರ ಅಗ್ನಾಡಿ, ಚಂದ್ರಶೇಖರ್ ಮಡಿವಾಳ, ಕೃಷ್ಣ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net