ಶ್ರೀರಾಮ ನಾಮದಲ್ಲಿ ಮಿಂದೆದ್ದ ಭಕ್ತರು

22 RPT 1
ರಿಪ್ಪನ್‌ಪೇಟೆ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ವಿನಾಯಕ ವೃತ್ತದವರೆಗೆ ಹಿಂದುಪರ ಸಂಘಟನೆಗಳಿAದ ಮೆರವಣಿಗೆ.
Published on

ರಿಪ್ಪನ್‌ಪೇಟೆ: ಅಯೋಧ್ಯೆ ಶ್ರೀ ಬಾಲರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಹೋಮ ಹವನಗಳನ್ನು ಆಯೋಜಿಸಿದ್ದು ಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಜತೆಗೆ ಶ್ರೀ ರಾಮತಾರಕ ಹೋಮ, ಶ್ರೀ ರಾಮ ಭಜನೆ ನೆರವೇರಿತು. ಬ್ರಾಹ್ಮಣ ಸಮಾಜದ ಶ್ರೀರಾಮ ಮಂದಿರದಲ್ಲಿ ರಾಮತಾರಕ ಹವನ ನೆರವೇರಿಸಿ ರಾಮ ಭಜನೆ ಜರುಗಿತು. ಕೆರೆಹಳ್ಳಿಯ ಶ್ರೀ ಅಂಬಾಭವಾನಿ, ಶ್ರೀ ರಾಮೇಶ್ವರ, ಹೊಂಬುಜ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ, ಜಿಎಸ್‌ಬಿ ಸಮಾಜದ ಶ್ರೀರಾಮ ಮಂದಿರ, ಬಿಲ್ಲೇಶ್ವರದ ಈಶ್ವರ ದೇವಸ್ಥಾನ, ಗವಟೂರು ಶ್ರೀ ರಾಮೇಶ್ವರ, ವಿನಾಯಕನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಲ್ಲೂರು ಈಶ್ವರ ದೇವಸ್ಥಾನ, ಮೂಗುಡ್ತಿ ಶ್ರೀ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಮಹಾಮಂಗಳಾರತಿ ಜತೆಗೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಪಟ್ಟಣದ ಶ್ರೀಸಿ ದ್ಧಿವಿನಾಯಕ ದೇವಸ್ಥಾನದಿಂದ ವಿನಾಯಕ ವೃತ್ತದವರೆಗೆ ವಿವಿಧ ಹಿಂದುಪರ ಸಂಘಟನೆಗಳಿAದ ಶ್ರೀರಾಮ ಸಂಕೀರ್ತನೆ, ಜಯ ಘೋಷಗಳೊಂದಿಗೆ ಮೆರವಣಿಗೆ ನಡೆಸಿದರು. ಶ್ರೀಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮೀಜಿ ಭಕ್ತವೃಂದ ಪಾನಕ ಸೇವೆ, ಬಜರಂಗದಳ, ವಿಎಚ್‌ಪಿಯಿಂದ ಕೋಸಂಬರಿ ಸೇವೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net