

ಮುಂಡರಗಿ: ಪಟ್ಟಣದ ಬಸವೇಶ್ವರ ನಗರದಲ್ಲಿ ಶುಕ್ರವಾರ ಆಯುಧ ಪೂಜೆ ಪ್ರಯುಕ್ತ ಭಕ್ತರು ಬನ್ನಿ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅನೇಕರು ಬನ್ನಿ ಕಟ್ಟೆಯ ಬಳಿ ಆಗಮಿಸಿ ದರ್ಶನ ಪಡೆದುಕೊಂಡರು.
ದಾನಮ್ಮ ಶೀರಿ, ಗಂಗಮ್ಮ ಅರಿಷಣದ, ಲಕ್ಷ್ಮೀ ಇಲ್ಲೂರ, ಶಾಂತಮ್ಮ ಬ್ಯಾಳಿ, ಕಸ್ತೂರೆವ್ವ ಬಡಿಗೇರ, ಪಾರಮ್ಮ ಶೇಡದ್, ಶ್ವೇತಾ ವಾಚನದಮಠ, ಕಾವ್ಯ ಕಮ್ಮಾರ, ಗಿರಿಜಮ್ಮ ಹಂದ್ರಾಳ, ಲಕ್ಷ್ಮೀ ಕಲ್ಲಳ್ಳಿ, ಸರೋಜಾ ಬೆಟಗೇರಿ,ಪೂಜಾ ಇಟಗಿ, ಸರೋಜಾ ಮುಧೋಳ, ಸವಿತಾ ಹೆಬ್ಬಸೂರ, ವೀಣಾ ಬಸೇಗೌಡರ, ರೇಖಾ, ಸೌಮ್ಯಾ, ಸುಮಾ, ಸಹನಾ, ರಾಧಾ ಇತರರು ಇದ್ದರು.
ಉಡಿ ತುಂಬುವ ಕಾರ್ಯ: ಪಟ್ಟಣ ಸೇರಿ ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿ ಉಡಿ ತುಂಬಿದರು. ವಿವಿಧ ದೇವಸ್ಥಾನಗಳಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಪರಸ್ಪರ ಬನ್ನಿ ನೀಡಿ ಶುಭಾಶಯ ಹಂಚಿಕೊಂಡರು.