

ಹಿರೇಕೆರೂರ: ಶ್ರಾವಣ ಮಾಸದ ಕೊನೆಯ ಮಂಗಳವಾರದ ನಿಮಿತ್ತ ಪಟ್ಟಣ ಸೇರಿ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಇಲ್ಲಿನ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆದರು.
ಪ್ರತಿವರ್ಷ ಶ್ರಾವಣ ಮಾಸದ ಕೊನೆ ಮಂಗಳವಾರ ದೇವಸ್ಥಾನದಲ್ಲಿ ದೇವಿಗೆ ವಜ್ರಾಭರಣದಿಂದ ಅಲಂಕರಿಸಿ ವಿಶೇಷ ಪೂಜೆ, ಹೂವಿನ ಅಲಂಕಾರ, ಮಹಾಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರು ದೇವಿಯ ದರ್ಶನ ಪಡೆದು, ಹರಕೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.
ಕೃಷ್ಣಪ್ಪ ಉಪ್ಪಾರ, ಲಕ್ಷಾಧಿಪತಿ ಬಣಕಾರ, ವೆಂಕಟೇಶ ಉಪ್ಪಾರ, ಎಂ.ಎಚ್. ಮುಂಡರಗಿ, ಸತ್ಕಾರ್ ಹೋಟೆಲ್ ಅವರಿಂದ ಪ್ರಸಾದ ಸೇವೆ ಜರುಗಿತು.
ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಗದೀಶ ತಂಬಾಕದ, ಪಪಂ ಸದಸ್ಯ ಹರೀಶ ಕಲಾಲ, ಬಸವರಾಜ ಕಟ್ಟಿಮನಿ, ಮಂಜುನಾಥ ತಂಬಾಕದ, ವಿನಾಯಕ ಮಾರವಳ್ಳಿ, ನವೀನ ಕುರಬರ, ವಿಜಯಕುಮಾರ ಮಾರವಳ್ಳಿ, ಲಿಂಗರಾಜ ನಾಯ್ಕರ, ಆನಂದ ನಾಯ್ಕರ, ಕುಮಾರ ಬಾಗಲಕೋಟಿ, ಬಿರೇಶ ಹಾರ‌್ನಳ್ಳಿ, ರವಿ ಉಣಕಲ್, ಚಂದ್ರು ಮಾರವಳ್ಳಿ, ಶಂಭು ಹಂಸಭಾವಿ, ಭಕ್ತಾದಿಗಳು ಇದ್ದರು.