ಜೇನುಕಲ್ ಸಿದ್ದೇಶ್ವರಸ್ವಾಮಿ ದರ್ಶನ ಪಡೆದ ಭಕ್ತರು

26arsph1ep
ಅರಸೀಕೆರೆ ತಾಲೂಕಿನ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಮೂಲಸನ್ನಿಧಿಗೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
Published on

ಅರಸೀಕೆರೆ: ಧನುರ್ಮಾಸದ ಹುಣ್ಣಿಮೆ ಪ್ರಯುಕ್ತ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಸನ್ನಿಧಿಗೆ ಮಂಗಳವಾರ ಸಹಸ್ರಾರು ಭಕ್ತರು ಆಗಮಿಸಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.

ಬೆಳಗ್ಗೆಯಿಂದಲೇ ಬೆಟ್ಟವನ್ನೇರಿ ಜೇನುಕಲ್ ಸಿದ್ದೇಶ್ವರರ ಪಾದಗಳ ದರ್ಶನ ಪಡೆದರು. ರುದ್ರಾಭಿಷೇಕ, ನೂರೊಂದೆಡೆ ಸೇವೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಗ್ರಾಮದ ಮಧ್ಯಭಾಗದಲ್ಲಿರುವ ಮೂಲ ದೇಗುಲದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ ಸಮಿತಿ, ಕಬ್ಬೂರಹಳ್ಳಿ ಹಾಗೂ ಯಳವಾರೆ ಗ್ರಾಮಸ್ಥರು ಪ್ರಸಾದ ವ್ಯವಸ್ಥೆ ಮಾಡಿದ್ದರು.

ಮುರುಂಡಿ, ಜವನಹಳ್ಳಿ, ಗೊಲ್ಲರಹಳ್ಳಿ, ಹಾರನಹಳ್ಳಿ, ಸಂಕೋಡನಹಳ್ಳಿ, ಕಾಟೀಕೆರೆ, ಮುದ್ದನಹಳ್ಳಿ, ಮಲ್ಲೇನಹಳ್ಳಿ, ಮುದ್ದರಂಗನಹಳ್ಳಿ, ಸಿದ್ದರಹಟ್ಟಿ, ಮುರುಂಡಿ ತಾಂಡ್ಯ, ಅಣ್ಣಾಯ್ಕನಹಳ್ಳಿ, ಹಾರನಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net