ಮಾರಿಕಾಂಬಾ ದೇವಿ ದರ್ಶನ ಪಡೆದ ಭಕ್ತರು

5 SRS 2
Published on

ಶಿರಸಿ: ಶರನ್ನವರಾತ್ರಿ ಅಂಗವಾಗಿ ನಗರದ ಮಾರಿಕಾಂಬಾ ದೇವಾಲಯಕ್ಕೆ ಶನಿವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ದೇವಾಲಯದ ಸಭಾ ಮಂಟಪದಲ್ಲಿ ಸಂಜೆ ಕೀರ್ತನಕಾರ ಆರ್. ಗುರುರಾಜಲು ನಾಯ್ಡು ಅವರ ಶಿಷ್ಯರಲ್ಲಿ ಒಬ್ಬರಾದ ಹರಿಕಥಾ ವಿದುಷಿ ಡಾ. ವಿ.ಮಾಲಿನಿ ಮೈಸೂರು ಅವರಿಂದ ಕೀರ್ತನೆ ಕಾರ್ಯಕ್ರಮ ನಡೆಯಿತು. ಭಾನುವಾರ ಸಂಜೆ ಅಗಜಗೌರಿ ವ್ರತ ಎಂಬ ಕಥಾ ಭಾಗವನ್ನು ಪ್ರಸ್ತುತಪಡಿಸಲಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ದೇವಾಲಯದ ಸಭಾಮಂಟಪದಲ್ಲಿ ಧ್ಯಾನಮಾಲಿಕೆ ಸ್ಪರ್ಧೆ, ಸಂಜೆ 3 ರಿಂದ ಜಾನಪದ ಗುಂಪು ನೃತ್ಯ ಸ್ಪರ್ಧೆಗಳು ಜರುಗಿದವು. ದೇವಾಲಯ ಅಧ್ಯಕ್ಷ ರವೀಂದ್ರ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್ ಹಾಗೂ ದರ್ಮದರ್ಶಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net