

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಮಂಗಳವಾರ ಭಕ್ತರು ತುಂತುರು ಮಳೆಯ ನಡುವೆಯೂ ಕಾಲ್ನಡಿಗೆಯಲ್ಲಿ ತೆರಳಿದರು.
ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೈಸೂರು, ಮಂಡ್ಯ, ಚಾ.ನಗರ, ಮಳವಳ್ಳಿ, ನಂಜನಗೂಡು ಹಾಗೂ ಇನ್ನಿತರ ಕಡೆಗಳಿಂದ ಹರಕೆ ಹೊತ್ತ ಭಕ್ತರು ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದೇವರ ದರ್ಶನ, ಉತ್ಸಾವಾದಿ ಸೇವೆಯಲ್ಲಿ ಭಾಗಿ ಹಾಗೂ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆಯೇ ಈ ಬಾರಿ ಜು.24 ರಂದು ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಭಕ್ತರು ಗುಂಪು ಗುಂಪಾಗಿ ಹನೂರು ಮಾರ್ಗವಾಗಿ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಮಂಗಳವಾರ ತುಂತುರು ಮಳೆಯನ್ನು ಲೆಕ್ಕಿಸದ ಭಕ್ತರು ಉತ್ಸಾಹದಿಂದ ಕಾಲ್ನಡಿಗೆಯನ್ನು ಮುಂದುವರಿಸಿದರು. ಈ ವೇಳೆ ಉಘೇ ಮಾದಪ್ಪ ಉಘೇ, ಜೈ ಮಹಾಂತ್ ಮಲೆಯಾ ಜಯಘೋಷಗಳನ್ನು ಮೊಳಗಿಸಿದರು.