ಸೋಮೇಶ್ವರ ದೇಗುಲಕ್ಕೆ ಬರುವ ಭಕ್ತರಿಗೆ ಕರೆಂಟ್ ಶಾಕ್ ಭೀತಿ!

LXR KARENT
Published on

ಲಕ್ಷೆ್ಮೕಶ್ವರ: ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನ ಪ್ರಾಂಗಣದಲ್ಲಿರುವ ವಿದ್ಯುತ್ ಬಾಕ್ಸ್ (ಸ್ವಿಚ್ ಬೋರ್ಡ್)ನಿಂದ ವಿದ್ಯುತ್ ಕಂಬ, ಗೋಡೆಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಆತಂಕ ಮೂಡಿಸಿದೆ.

ಇಲ್ಲಿಗೆ ಬರುವ ಭಕ್ತರು, ಶಾಲಾವರಣ ಇರುವುದರಿಂದ ಆಡಲು ಬರುವ ಮಕ್ಕಳು ಏನೂ ತಿಳಿಯದೆ ಗೋಡೆ, ಕಂಬ, ತಂತಿ ಮುಟ್ಟಿದರೆ ಶಾಕ್ ಹೊಡೆಯುವುದು ಖಚಿತ. ದೇವಸ್ಥಾನಕ್ಕೆ ಬರುವ ಅನೇಕರಿಗೆ ಈಗಾಗಲೇ ಈ ಅನುಭವವಾಗಿದೆ.

ಗುರುವಾರವೂ ಒಬ್ಬರಿಗೆ ಶಾಕ್ ಹೊಡೆದಿದೆ. ಈ ಬಗ್ಗೆ ಪುರಸಭೆ, ಹೆಸ್ಕಾಂಗೆ 15 ದಿನಗಳಿಂದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಳೆಗಾಲ ಆಗಿರುವುದರಿಂದ ಅಪಾಯವಾಗುವ ಸಾಧ್ಯತೆಯಿದೆ. ಇಂತಹ ಅನೇಕ ಸಮಸ್ಯೆಗಳು ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿವೆ.

ಸಂಬಂಧಪಟ್ಟರು ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರ, ಭಕ್ತರ, ಮಕ್ಕಳ ಹಿತ ಕಾಪಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net