

ತಾವರಗೇರಾ: ಪಟ್ಟಣದ ಹಜರತ್ ಸಯ್ಯದ್ ಷಾ ಹಮೀದೊದ್ದೀನ್ ಖಾದ್ರಿ ಶ್ಯಾಮೀದಲಿ ದರ್ಗಾ ಹಾಗೂ ಹಜರತ್ ಖಾಜಾ ಬಂದೇನವಾಜ ಗೇಸುದರಾಜ ರಹಮತ್ ಉಲ್ಲಾ ಅಲೇಹಾ ಇವರ 621ನೇ ಪುಣ್ಯ ದಿನದ ನಿಮಿತ್ತ ಉಭಯ ದರ್ಗಾಗಳ ಉರುಸ್ ಗುರುವಾರ ನೆರವೇರಿತು. ಸಕಲ ವಾದ್ಯಗಳೊಂದಿಗೆ ಗಂಧ ಮೆರವಣಿಗೆ ಮಾಡಲಾಯಿತು. ಎರಡೂ ದರ್ಗಾಗಳಲ್ಲಿ ಊರಿನ ಪ್ರಮುಖರು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಗಂಧ ಏರ್ಪಡಿಸಲಾಗಿತ್ತು. ಭಕ್ತರು ನೈವೇದ್ಯ ಹಾಗೂ ಸಕ್ಕರೆಯನ್ನು ಸಮರ್ಪಿಸಿದರು. ಮಕ್ಕಳ ಮನರಂಜನೆಗೆ ತೊಟ್ಟಿಲು ಸೇರಿ ವಿವಿಧ ಆಟಿಗೆ ಸಾಮಾಗ್ರಿಗಳ ಮಾರಾಟ ಮಳಿಗೆ ಹಾಕಲಾಗಿತ್ತು. ಉರುಸಿನ ಪ್ರಯುಕ್ತ ರಾತ್ರಿ ಶಾಮೀದಲಿ ದರ್ಗಾ ಆವರಣದಲ್ಲಿ ಹೈದರಾಬಾದ್, ಕಲಬುರಗಿ ಹಾಗೂ ಸೂರತ್‌ಗಳಿಂದ ಆಗವಿಸಿದ್ದ ಕಲಾವಿದರು ಕವ್ವಾಲಿ ಕಾರ್ಯಕ್ರಮ ನಡೆಸಿದರು.