ಧರ್ಮಸ್ಥಳದಲ್ಲಿ ಚಾಮರಾಜನಗರದ ಭಕ್ತರು

New Project (24)
Published on

ಬೆಳ್ತಂಗಡಿ: ಮೈಸೂರಿನ ಚಾಮರಾಜನಗರ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡರ ನೇತೃತ್ವದಲ್ಲಿ ಎರಡು ಸಾವಿರ ಭಕ್ತರು ಬುಧವಾರ ಸಂಜೆ ಧರ್ಮಸ್ಥಳಕ್ಕೆ 50 ವಾಹನಗಳಲ್ಲಿ ಆಗಮಿಸಿದರು.

ಅವರನ್ನು ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತಿಸಲಾಯಿತು. ಸೆ.4ರಂದು ಬೆಳಗ್ಗೆ 9ಕ್ಕೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಲಿದ್ದಾರೆ. ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರ ಖಂಡಿಸಿ ಸರ್ವಧರ್ಮ ಸಮನ್ವಯ ಕ್ಷೇತ್ರದ ರಕ್ಷಣೆ, ಪಾವಿತ್ರೃ ಕಾಪಾಡುವ ಬಗ್ಗೆ ಭಕ್ತರು ತಮ್ಮ ಪೂರ್ಣ ಬೆಂಬಲ ವ್ಯಕ್ತಪಡಿಸುವರು ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಮಹಾಮಂಡಲ ಅಧ್ಯಕ್ಷ ಚಂದ್ರಶೇಖರ, ಕಾಂಗ್ರೆಸ್ ಪಕ್ಷದ ಮುಖಂಡ ಮಂಜುನಾಥ, ಬ್ಲಾಕ್ ಅಧ್ಯಕ್ಷ ರಮೇಶರಾಯಪ್ಪ, ರವಿ, ಮೈಸೂರಿನ ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ ಮೊದಲಾದವರು ಸೇರಿ 2000 ಮಂದಿ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net