

ಅರಕಲಗೂಡು: ಪಟ್ಟಣದ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಮತ್ತು ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ 8ನೇ ವರ್ಷದ ವೈಕುಂಠ ಏಕಾದಶಿ ಉತ್ಸವ ಸಂಭ್ರಮದಿಂದ ಜರುಗಿತು.
ದೊಡ್ಡಮಠದ ಮಠಾಧೀಶ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶಿರದನಹಳ್ಳಿ ಬಸವಕಲ್ಯಾಣ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಸೇವಾರ್ಥದಾರರನ್ನು ಗೌರವಿಸಲಾಯಿತು.
ಬಳಿಕ ಮಹಾಮಂಗಳಾರತಿ, ಸಪ್ತದ್ವಾರ ಪ್ರವೇಶ, ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಎ. ಜಿ.ರಾಮನಾಥ್, ಮಾಜಿ ಅಧ್ಯಕ್ಷ ಎ.ಆರ್.ಜನಾರ್ದನ ಗುಪ್ತ, ಕಾರ್ಯದರ್ಶಿ ಪಿ.ಡಿ.ರಾಜೇಂದ್ರಕುಮಾರ್, ಸಹಕಾರ್ಯದರ್ಶಿ ಪಿ.ಎಲ್ ಜಗದೀಶ್, ಖಜಾಂಚಿ ವಾಸವಾಂಬ ಜೆ. ಗುಪ್ತ, ಆರ್ಯವೈಶ್ಯ ಮಂಡಳಿಯ ಪಿ.ಎನ್. ರಂಗನಾಥ್ ಇತರರು ಇದ್ದರು.
ಪಟ್ಟಣದ ಕೋಟೆ ಐತಿಹಾಸಿಕ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರಥಮ ವರ್ಷದ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂರ್ತಿಗಳನ್ನು ಅಲಂಕರಿಸಿ ವೈಕುಂಠ ದ್ವಾರದಲ್ಲಿ ಪ್ರತಿಷ್ಠಾಪಿಸಿ ಪೂಜೆ ನಡೆಸಲಾಯಿತು. ಬಳಿಕ ಭಕ್ತರು ವೈಕುಂಠ ದ್ವಾರದಲ್ಲಿ ತೆರಳಿ ತೀರ್ಥ ಪ್ರಸಾದ ಸ್ವೀಕರಿಸಿದರು. ರಾತ್ರಿ ರಥ ಬೀದಿಯಲ್ಲಿ ದೇವರ ಉತ್ಸವ ನಡೆಸಿ ತೀರ್ಥ, ಪ್ರಸಾದ ವಿತರಿಸಲಾಯಿತು.
ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಷ್ಣುವಿನ ಅಲಂಕಾರ ಮಾಡಲಾಗಿತ್ತು.
10ಎಆರ್‌ಕೆ2..
ಅರಕಲಗೂಡು ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಮತ್ತು ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಮಹಿಳೆಯರು ವೈಕುಂಠ ದ್ವಾರದಲ್ಲಿ ಪ್ರವೇಶಿಸಿದರು.
10ಎಆರ್‌ಕೆ3..
ಅರಕಲಗೂಡು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಷ್ಣುವಿನ ಅಲಂಕಾರ ಮಾಡಲಾಗಿತ್ತು.
0ಎಆರ್‌ಕೆ4..
ಅರಕಲಗೂಡು ಕೋಟೆ ಐತಿಹಾಸಿಕ ಶ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಭಕ್ತರು ವೈಕುಂಠದ್ವಾರ ಪ್ರವೇಶಿಸಿ ತೀರ್ಥ, ಪ್ರಸಾದ ಸ್ವೀಕರಿಸಿದರು.