

ಮಹಾಂತೇಶ ಬಾಳಿಕಾಯಿ ಮುರಗೋಡ
ನೆಡದಾಡುವ ದೇವರು, ಅನೇಕ ಪವಾಡ ಗೆದು ನಾಡಿನಾದ್ಯಂತ ಹೆಸರಾದ ಮುರಗೋಡ ಮಠದ ಲಿಂ.ಮಹಾಂತ ಶಿವಯೋಗಿಗಳ ಮಹಿಮೆ ಅಪಾರ. ಸಕಲ ಭಕ್ತರು ಬೇಡಿದ ವರವನ್ನು ನೀಡುವ ಭಗವಂತ ಮಹಾಂತ ಅಜ್ಜ. ಮಹಾಂತ ಶಿವಯೋಗಿಗಳ 53ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮಾ.10ರಂದು ಮಹಾರಥೋತ್ಸವ ಜರುಗಲಿದೆ.
ಭಕ್ತರ ಬೆಳಕು ನೀಲಕಂಠ ಸ್ವಾಮೀಜಿ: ಶ್ರೀ ಮಹಾಂತ ಶಿವಯೋಗಿಗಳು 1973ರಲ್ಲಿ ಲಿಂಗೆಕ್ಯರಾದ ಬಳಿಕ ಮಹಾಂತಜ್ಜನ ತತ್ತ$್ವ ಸಿದ್ಧಾಂತಗಳನ್ನು ಈಗಿನ ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಅಳವಡಿಸಿಕೊಂಡು ತ್ರಿಕಾಲ ಲಿಂಗ ಪೂಜಾ ನಿಷ್ಠೆ ಬೆಳೆಸಿಕೊಂಡರು. ಭಕ್ತರ ಬಾಳಿನ ಕಾಮಧೇನು ಕಲ್ಪವವಾಗಿ, ಶ್ರೀಮಠದ ಅಭಿವೃದ್ಧಿಯೊಂದಿಗೆ ಸಾಮಾಜಿಕ ಕಾರ್ಯಗಳಿಂದ ಜನರ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ.
ಶ್ರೀಮಠಕ್ಕೆ ಸಂಬಂಧಿಸಿದ ಶಿಣ ಸಂಸ್ಥೆಗಳನ್ನು ಉನ್ನತಮಟ್ಟಕ್ಕೆ ಏರಿಸಿ, ಶ್ರೀಮಠದ ನವೀಕರಣ, ಶ್ರೀ ಗದ್ದುಗೆಗೆ ಬಂಗಾರದ ಕಳಸಾರೋಹಣ, ಅಮತ ಶಿಲೆಗಳ ಹೊದಿಕೆ, ಗುರುಮಠದ ಅಡುಗೆ ಕೋಣೆಗಳ ನವೀಕರಣ, ಕಲ್ಯಾಣ ಮಂಟಪದ ನಿರ್ಮಾಣ ಕಾಯಕ, ಮಳಿಗೆ ಗಡ್ಡಿರಥ ನಿರ್ಮಿಸಿದ್ದಾರೆ. ಮೂರು ಸಲ ಶ್ರೀ ಮಠದಲ್ಲಿ ಬಸವ ಪುರಾಣ ಶಷ್ಟ$್ಯಬ್ದಿ ಪ್ರಯುಕ್ತವಾಗಿ 60 ಹಳ್ಳಿಯಲ್ಲಿ ಧರ್ಮ ಜಾಗತಿ ಸಭೆಗೆದು, ಸೋಗಲ&ಕಾರಿಮನಿ ಮಧ್ಯದ ನಿಸರ್ಗದಲ್ಲಿ ಪಂಚವಟಿ ಕಲ್ಯಾಣ ಕೇಂದ್ರ ಸ್ಥಾಪಿಸಿ ಅಧ್ಯಾತ್ಮದ ಮೂಲಕ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ.
ಗೋಶಾಲೆಯಲ್ಲಿ 150 ಆಕಳುಗಳ ಕಟ್ಟಡ, ಶ್ರೀಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಪ್ರಸಾದ ನಿಲಯ, ಶ್ರೀ ಮಹಾಂತೇಶ್ವರ ಸಂಸತ ಧಾರ್ಮಿಕ ವೈದಿಕ ಪಾಠಶಾಲೆ ಆರಂಭಿಸಿ 1,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ೇತ್ರದಲ್ಲಿ ಸಾಧನೆೆ ಮಾಡುವ ಮೂಲಕ ಪ್ರೇರೇಪಿಸಿದ್ದಾರೆ. ವಟುಗಳಿಗೆ ಹತ್ತಾರು ಮಠಗಳಿಗೆ ಸ್ವಾಮೀಜಿ ಸ್ಥಾನ ನೀಡಿದ್ದಾರೆ. ಬಹತ್ ಯೋಜನೆಯಾದ ಪಂಚವಟಿಯಲ್ಲಿ ಜ್ಞಾನ ಮಂದಿರ, ಯೋಗ ಕೇಂದ್ರ, 70 ಲ ರೂ. ವೆಚ್ಚದಲ್ಲಿ ಯಾತ್ರಾ ನಿವಾಸ, ಆಕಳ ಸಗಣೆಯಿಂದ ವಿಭೂತಿ ತಯಾರಿಕೆ ಟಕ ನಿರ್ಮಾಣ ಹೀಗೆ ನೀಲಕಂಠ ಸ್ವಾಮೀಜಿ ಕನಸು ಅವಿಸ್ಮರಣೀಯ. ಇಂದು ಭಕ್ತರಿಗೆ ಭಕ್ತರೆಂಬ ಬಹತ್ ಆಸ್ತಿಯೇ ಶ್ರೀಮಠಕ್ಕೆ ಮೂಲಾಧಾರವಾಗಿ ಲಾಂತರ ಭಕ್ತರು ಹರಿದು ಬರುತ್ತಿದ್ದಾರೆ. ಶ್ರೀ ಮಠದ ಏಳಿಗೆ ಮತ್ತು ಜೀಣೋರ್ದ್ದಾರಕ್ಕೆ 2 ಕೋಟಿ ರೂ. ವೆಚ್ಚದಲ್ಲಿ ಗುರುಭವನ ಶೀಲಾನ್ಯಾಸ ಚಾಲನೆ ದೊರೆಯಲಿದೆ.
ಕಾರ್ಯಕ್ರಮಗಳು: ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು, ಮಾ.10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಮಠದಲ್ಲಿ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ, ಮಹಾ ಪ್ರಸಾದ, ಹಳೇ ಬಸ್ ನಿಲ್ದಾಣದಿಂದ ನಂದಿಕೋಲು ಉತ್ಸವ, ಬೃಹತ್ ರುದ್ರಾ ಮಾಲೆ, ಹೂ ಮಾಲೆ ಮೆರವಣಿಗೆ, ಮಹಾಂತ ಶಿವಯೋಗಿಗಳ ಬೆಳ್ಳಿ ಮೂರ್ತಿ, ಬಂಗಾರದ ಪಾದುಕೆ ಪೂಜೆ ಮಹಾರಥೋತ್ಸವ ಜರಗುವುದು. ಸಂಜೆ ಪುಣ್ಯಸ್ಮರಣೋತ್ಸವ ಗೋಷ್ಠಿ ಹಾಗೂ ಸಮಾರಂಭ ಜರುಗುವುದು.
ಮುರಗೋಡ ಮಠದ ಭಕ್ತರ ಪಾಲಿನ ದೇವರು ಶ್ರೀ ಮಹಾಂತ ಅಜ್ಜ. ನೀಲಕಂಠ ಸ್ವಾಮೀಜಿ ಅವರ ಆಶೀರ್ವಾದದ ಲದಿಂದ ಶ್ರಿಮಠ ಜೀಣೋರ್ದ್ಧಾರಗೊಂಡು ಲಾಂತರ ಭಕ್ತರ ಪ್ರವಾಸಿ ತಾಣವಾಗಿದೆ.
> ಬಸವರಾಜ ಬ್ಯಾಳಿ, ೇತ್ರ ಸಮನ್ವಯಾಧಿಕಾರಿ ಸವದತ್ತಿ
ಮುರಗೋಡದ ಮಠ ಭಕ್ತರ ಉದ್ಧಾರಕ್ಕೆ ಬಹತ್ ಯೋಜನೆ ರೂಪಿಸಿದ್ದು, ನೂತನ ಗುರು ಭವನ ಕಟ್ಟಡ ನಿರ್ಮಾಣ ಕಾರ್ಯ 2 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗಿದೆ.
> ಮಹಾಂತೇಶ ದಾಡಿಗುಂಡಿ, ತೆರಿಗೆ ಮತ್ತು ಕಾನೂನು ಸಲಹೆಗಾರ, ಬೆಲಹೊಂಗಲ&ಮುರಗೋಡ