

ಕಕ್ಕೇರಿ: ಗ್ರಾಮದ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಭಕ್ತರು ಪ್ರಾಣಿ ಬಲಿ ಕೊಡಬಾರದು. ಅಂತಹ ಟನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ದುಂಡಪ್ಪ ಕೊಮಾರ ಎಚ್ಚರಿಕೆ ನೀಡಿದರು.
ಇಲ್ಲಿನ ಗ್ರಾಪಂ ಸಭಾ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಿಪಿಐ ಎಸ್.ಸಿ.ಪಾಟೀಲ ಮಾತನಾಡಿ, ಜಾತ್ರೆ ಹಿನ್ನೆಲೆಯಲ್ಲಿ ಈಗಾಗಲೇ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಜಾತ್ರೆಯಲ್ಲಿ ರಸ್ತೆ ಅಕ್ಕ ಪಕ್ಕದ 15 ಅಡಿ ಅಂತರ ಬಿಟ್ಟು ಅಂಗಡಿಗಳಿಗೆ ಜಾಗ ನೀಡಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯೆ ಕವಿತಾ ಹಂಚಿನಮನಿ, ಹೆಸ್ಕಾಂ ವಲಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಕಮ್ಮಾರ, ಟಿಎಚ್ಒ ಮಹೇಶ ಕಿವಡಸನ್ನವರ, ಮಂದಿರದ ಅಧ್ಯ ಕಾರ್ತಿಕ ಅಂಬೋಜಿ ಮಾತನಾಡಿದರು.
ಸಂಜೀವ ಬೊಂಗಾಳೆ, ಅರ್ಚನಾ ಪಾಟೀಲ, ಎಎಸ್ಐ. ಬಿ.ಬಿ.ಆರೇರ, ನಾಗರಾಜ ಬೆಳವಡಿ, ಶಿವಕುಮಾರ ಬಳ್ಳಾರಿ, ನಾಗರಾಜ ಭಜಂತ್ರಿ, ಕರವೀರ ಗಂದಿಗವಾಡ, ಕಂದಾಯ ನಿರೀಕ ಬಿ.ಎನ್.ಸೀಮಾನಿ, ಗ್ರಾಮ ಆಡಳಿತಾಧಿಕಾರಿ ರಾಜೇಶ ಯು, ಹೆಸ್ಕಾಂ ಎಇಇ ಲಕ್ಷಿ$್ಮ ರಂಗನಾಥ, ಗ್ರಾಪಂ ಉಪಾಧ್ಯೆ ಬಿಷ್ಟವ್ವ ಕೊಪ್ಪದ, ಮಾಜಿ ಅಧ್ಯ ಭೀಮಪ್ಪ ಅಂಬೋಜಿ, ಗ್ರಾಪಂ ಸದಸ್ಯರಾದ ರಿಯಾಜ್ಅಹ್ಮದ ಪಟೇಲ್, ದಯಾನಂದ ಗುಪಿತ, ಗುರುಸಿದ್ಧ ತಳವಾರ, ಭದ್ರು ದೊಡ್ಡಮನಿ ಇತರರಿದ್ದರು. ಬಸವರಾಜ ಅಂಬಡಗಟ್ಟಿ ಸ್ವಾಗತಿಸಿದರು. ಆಜಾದ್ ಸೌದಾಗಾರ ನಿರೂಪಿಸಿದರು. ಇಲಿಯಾಸ್ ಮುಲ್ಲಾ ವಂದಿಸಿದರು.