

ಮುರಗೋಡ: ಸಮೀಪ ಹಾರುಗೊಪ್ಪ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಮಂಗಳವಾರ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ&ಹವನ, ಭಂಡಾರದೋಕುಳಿ ನಡೆಯಿತು. ದುರ್ಗಾದೇವಿ ರಥದ ಹೊನ್ನಾಟ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಭಂಡಾರ, ಗುಲಾಲ ಎರಚುತ್ತ ದೇವಿಗೆ ಗುಡಿಯ ಎದುರು ಅಗ್ನಿಕುಂಡ ಹಾಯ್ದರು.
ಭಕ್ತಾದಿಗಳು ಕೆಂಡ ಹಾಯುವಾಗ ಕೋಳಿ, ಹುಂಜಗಳನ್ನು ದೇವಿಗೆ ಅರ್ಪಿಸಿ ಹರಕೆ ತೀರಿಸಿದರು. ಅನ್ನಪ್ರಸಾದ ನಡೆಯಿತು. ದೇವಸ್ಥಾನವು ವಿದ್ಯುತ್ ದೀಪಾಲಂಕಾರದಿಂದ ವಿಜಂಭಣೆಯಿಂದ ಕಂಗೊಳಿಸಿದೆ. ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು. ಮುಖಂಡರಾದ ಮುದಕಪ್ಪ ಕರೆಪ್ಪನ್ನವರ, ಶಿವಪ್ಪ ಹೊಸಮನಿ, ಅಡಿವೆಪ್ಪ ಪೂಜೇರಿ, ಯಶವಂತ ಕೋಲಕಾರ, ಬಸವರಾಜ ಕರೆಪ್ಪನ್ನವರ, ಚಿದಾನಂದ ಪೂಜೇರಿ, ಮಹಾಂತೇಶ ಹೊಸಮನಿ, ಮರೆಪ್ಪ ಹರಿಜನ, ಮಲ್ಲಪ್ಪ ಕೋಲಕಾರ, ಗಂಗಪ್ಪ ಹೊಸಮನಿ, ಮಹಾದೇವ ಹುಲಿಕಟಿ,್ಟ ನಿಂಗಪ್ಪ ಪೂಜೇರಿ, ಸಿದ್ರಾಮಪ್ಪ ಪೂಜೇರಿ, ಕೀರಪ್ಪ ಹರಿಜನ, ಪ್ರಕಾಶ ಕೋಲಕಾರ, ರುದ್ರಯ್ಯ ಕಲ್ಮಠ, ಭರತೇಶ ಕೋಲಕಾರ ಪಾಲ್ಗೊಂಡಿದ್ದರು.