ಗ್ರಂಥಾಲಯಕ್ಕೆ ಸಮಯ ಮೀಸಲಿಡಿ

LIBRARY
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ದೇಣಿಗೆ ನೀಡಿದ ಇಂಜಿನೀಯರ್ ನಾರಾಯಣಪ್ಪ ಭಾಗ್ಯರತ್ನಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಪ್ರಮುಖರಾದ ಭಾಗ್ಯರತ್ನಮ್ಮ, ಶಿಕ್ಷಕರಾದ ಗಿರಿಯಪ್ಪ ಹಾರನಳ್ಳಿ, ರವಿಕಿರಣ ಟಿಕಾರೆ, ನಾರಾಯಣಪ್ಪ ಬಿಸನಳ್ಳಿ, ರಾಜಾಸಾಹೇಬ ಬಳಿಗಾರ, ಪ್ರಕಾಶರಡ್ಡಿ ಗೋವಿಂದರಡ್ಡಿ, ಸುರೇಶ ಮಾಳಿ, ಮರ್ದಾನಲಿ ಗಡಾದ, ತುಕಾರಾಮ ಪೂಜಾರ, ಬಸಮ್ಮ ತೋಟದ, ಶಿರಸಪ್ಪ ಹಾಗೂ ಇತರರು ಇದ್ದರು.
Published on

ಅಳವಂಡಿ: ಮಕ್ಕಳು ಗ್ರಂಥಾಲಯ ಪುಸ್ತಕಗಳ ಜ್ಞಾನವನ್ನು ಪಡೆದು ಓದಿನ ಹಸಿವು ತೀರಿಸಿಕೊಳ್ಳಬೇಕು ಎಂದು ಜಾಂಬಿಯಾ ಇಂಜಿನೀಯರ್ ನಾರಾಯಣಪ್ಪ ನಾಗರಡ್ಡಿ ತಿಳಿಸಿದರು. ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ ನಂತರ ಮೆಚ್ಚುಗೆ ವ್ಯಕ್ತಪಡಿಸಿ ಬುಧವಾರ ಮಾತನಾಡಿದರು.

ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅವಶ್ಯ ಇರುವ ಸಾಮಾನ್ಯ ಜ್ಞಾನ ಗ್ರಂಥಾಲಯಗಳಲ್ಲಿ ಸಿಗುತ್ತವೆ. ಕಾರಣ ಮಕ್ಕಳು ಗ್ರಂಥಾಲಯಕ್ಕೆ ಸಮಯ ಮೀಸಲಿಟ್ಟು ಅವಶ್ಯ ಇರುವ ವಿಷಯಗಳತ್ತ ಗಮನಹರಿಸಬೇಕು ಎಂದರು.

ಶಿಕ್ಷಕ ಹಾಗೂ ಗ್ರಂಥಪಾಲಕ ಶಿರಸಪ್ಪ ಗಡಾದ ಮಾತನಾಡಿ, ಜಾಂಬಿಯಾದಲ್ಲಿ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾರಾಯಣಪ್ಪ ಶಿಕ್ಷಣ ಪ್ರೇಮಿಯಾಗಿದ್ದು ಗ್ರಂಥಾಲಯಗಳ ಪುಸ್ತಕಗಳ ಅವಶ್ಯಕತೆ ಮನಗಂಡು 25 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿ ಶಾಲೆಯ ಅಂದ ಹೆಚ್ಚಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net