

ಶಿಗ್ಗಾಂವಿ: ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪ್ರಗತಿಗೆ ಹೆಚ್ಚು ಸಮಯ ಮೀಸಲಿಟ್ಟುಕೊಂಡು ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಗುಜರಾತ ಅಂಬುಜಾ ಸಿಇಒ ನಾಗೇಶ ಶರ್ಮಾ ಹೇಳಿದರು.
ಪಟ್ಟಣದ ತಾಲೂಕು ಶಿಕ್ಷಣ ಸಮಿತಿ, ಶ್ರೀಮಂತ ಬಸವಂತರಾವ ಬುಳ್ಳಪ್ಪ ಮಾಮ್ಲೆದೇಸಾಯಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗೆಬಾವಿಯ ಕೆಎಸ್ಆರ್ಪಿ 10 ನೇ ಬಟಾಲಿಯನ್ ಪೊಲೀಸ್ ಕಮಾಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಮಾತನಾಡಿ, ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸತತ ಪ್ರಯತ್ನಪಟ್ಟರೆ ಮಾತ್ರ ಯಶಸ್ಸು ಸಿಗುತ್ತದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಸಿ. ನಾಗರಜ್ಜಿ ಮತ್ತು ತಾಲೂಕು ಶಿಕ್ಷಣ ಸಮಿತಿ ಉಪಾಧ್ಯಕ್ಷ ದತ್ತಣ್ಣಾ ವೇರ್ಣೆಕರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಕಾರ್ಯದರ್ಶಿ ಎಸ್.ಪಿ. ಜೋಶಿ, ರಾಜಣ್ಣ ಮಾಮ್ಲೇದೇಸಾಯಿ, ಡಾ.ಪಿ.ಆರ್. ಪಾಟೀಲ, ಎಂ.ಎಲ್. ದೇಶಪಾಂಡೆ, ಎಸ್.ಎಂ. ಚಿನ್ನಪ್ಪನವರ, ವಿ.ಬಿ. ಮೇಟಿ, ಎಸ್.ಎಫ್. ಯಲಿಗಾರ, ಎಸ್.ಎಂ. ಬುಳ್ಳಕ್ಕನವರ, ಸಿ.ಎಸ್. ಪಾಲನಕರ, ಎಸ್.ಎಸ್. ರಾಮಗೇರಿ, ವಿ.ಎಂ. ಅಂಕಲಕೋಟಿ, ಜಯಣ್ಣ ಹೆಸರೂರ, ಅಶೋಕ ಕಾಳೆ, ಬಶೆಟ್ಟೆಪ್ಪ ಯಲಿಗಾರ, ಶಿವಾನಂದ ಕುನ್ನೂರ, ಪ್ರಾಚಾರ್ಯ ಆರ್.ಎಸ್. ಭಟ್ ಸೇರಿ ನಿವೃತ್ತ ಸಿಬ್ಬಂದಿ, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ಕೆ.ಬಿ. ಚೆನ್ನಪ್ಪ ಸ್ವಾಗತಿಸಿದರು, ಡಾ. ಹರ್ಲಾಪೂರ ಕಾರ್ಯಕ್ರಮ ನಿರ್ವಹಿಸಿದರು.