ಕ್ರೀಡೆಯಿಂದ ಆರೋಗ್ಯಯುತ ಜೀವನ

devnalli sports
Published on

ದೇವನಹಳ್ಳಿ: ಶಾಂತಿ ನಗರದಲ್ಲಿರುವ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಲಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದೇವನಹಳ್ಳಿಯ ವೇಣುಗೋಪಾಲ್ ಮತ್ತು ಮಂಜುನಾಥ್ ಮೊದಲ ಸ್ಥಾನ ಹಾಗೂ ಮೈಸೂರಿನ ವರುಣ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಧನಂಜಯ್ ಹಾಗೂ ಅಂಬರೀಶ್ 3ನೇ ಸ್ಥಾನ ಪಡೆದರು. ವಿವಿಧ ಭಾಗಗಳಿಂದ 28 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪಂದ್ಯಾವಳಿಗೆ ಚಾಲನೆ ನೀಡಿದ ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ಯಶಸ್ವಿನಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕ್ರೀಡೆಯನ್ನು ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಕ್ರೀಡೆ ಮೈಗೂಡಿಸಿಕೊಳ್ಳುವುದರಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಜೆಸಿಐ ಸಂಸ್ಥೆಯ ಅಧ್ಯಕ್ಷ ಡಿ.ಎಂ.ವೇಣುಗೋಪಾಲ್ ಮಾತನಾಡಿ, ಸಂಸ್ಥೆಯೂ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ದೈಹಿಕ ಆರೋಗ್ಯ ಮತ್ತು ಮನರಂಜನೆಯ ಭಾಗವಾಗಿ ಕ್ರೀಡೆ ಆಯೋಜಿಸಲಾಗಿದೆ ಎಂದರು.
ಪುರಸಭೆಯ ಮಾಜಿ ಸದಸ್ಯ ಎಸ್.ಆರ್.ರವಿ, ಜೆಸಿಐ ಸಂಸ್ಥೆಯ ಪದಾಧಿಕಾರಿಗಳಾದ ಪ್ರಶಾಂತ್.ಕೆ.ಡಿ.ಸುರೇಶ್, ಪ್ರವೀಣ್, ಜಿ.ಎ.ರವೀಂದ್ರ, ನರಸಿಂಹಮೂರ್ತಿ, ಡಿ.ನಾರಾಯಣಸ್ವಾಮಿ, ಅಮರ್ ಪಿ.ಬಾಣವಾರ, ಒಳಾಂಗಣ ಕ್ರೀಡಾಂಗಣದ ಅಧ್ಯಕ್ಷ ನಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net