

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಎಲ್ಲ ವೃತ್ತಿಯನ್ನೂ ಗುರುತಿಸುವ ಸರ್ಕಾರ ೆಟೋಗ್ರಾಫರ್‌ಗಳನ್ನು ಕಡೆಗಣಿಸಿದೆ. ಇಂದು ಛಾಯಾಚಿತ್ರವಿಲ್ಲದೆ ಜನರಿಗೆ ಸರ್ಕಾರದ ಯೋಜನೆ ತಿಳಿಯುವುದಿಲ್ಲ. ಇಂತಹ ೆಟೋ ತೆಗೆಯುವ ಛಾಯಾಗ್ರಹಕರ ಅಭ್ಯುದಯಕ್ಕಾಗಿ ಸರ್ಕಾರ ಅಕಾಡೆಮಿ ಆರಂಭಿಸಬೇಕು ಎಂದು ಕರ್ನಾಟಕ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ನಾಗೇಶ್ ಹೇಳಿದರು.
ಪಟ್ಟಣದ ಡಿಎಚ್‌ಎಲ್ ಕನ್ವೆನ್ಷನ್ ಹಾಲ್‌ನಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ 184ನೇ ವಿಶ್ವ ಛಾಯಾಗ್ರಹಣ ದಿನದಲ್ಲಿ ಮಾತನಾಡಿದರು.
ನೂರಾರು ವರ್ಷಗಳ ಅನ್ವೇಷಣೆ ನಡೆದು ಅಂತಿಮವಾಗಿ 184 ವರ್ಷಗಳ ಹಿಂದೆ ಫೋಟೋ ಕ್ಯಾಮರಾ ಕಂಡುಹಿಡಿಯಲಾಯಿತು. ಇಂದು ಫೋಟೋ ಹಾಗೂ ವಿಡಿಯೋ ಕ್ಯಾಮರಾಗಳು ಹಲವಾರು ಬದಲಾವಣೆ ಕಂಡಿವೆ. ತಂತ್ರಜ್ಞಾನ ಏನೇ ಬದಲಾದರೂ ಉತ್ತಮ ಛಾಯಾಗ್ರಹಣ ಹಾಗೂ ಗುಣಮಟ್ಟದ ಫೋಟೋ ತೆಗೆಯಬೇಕಾದರೆ ಕ್ಯಾಮರಾ ಬೇಕು. ಆದರೂ ಮೊಬೈಲ್ ಕ್ಯಾಮರಾ ಬಂದ ಬಳಿಕ ಸ್ವಲ್ಪ ಮಟ್ಟಿಗೆ ವೃತ್ತಿಪರ ಛಾಯಾಗ್ರಾಹಕರಿಗೆ ಹೊಡೆತ ಬಿದ್ದಿದೆ ಎಂದರು.
ಗ್ರಾಮಾಂತರ ಜಿಲ್ಲೆಯಲ್ಲಿ 25 ಸಾವಿರ ಛಾಯಾಗ್ರಾಹಕರನ್ನು ಸೇರಿಸಿ ರಾಜ್ಯಮಟ್ಟದಲ್ಲಿ ಸಮಾವೇಶ ಮಾಡಿ, ನಮ್ಮ ಬೇೆಡಿಕೆಗಳ ಬಗ್ಗೆ ಗಮನಸೆಳೆಯುವ ಕೆಲಸ ಮಾಡೋಣ ಎಂದರು.
ಕೆಪಿಎ ನಿರ್ದೇಶಕ ಬೀಡಕೆರೆ ರವಿಕುಮಾರ್ ಮಾತನಾಡಿ, ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು. ೆಟೋಗ್ರಫಿ ವೃತ್ತಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಯಶಸ್ಸು ಅವಲಂಬಿಸಿದೆ ಎಂದರು.
ವೈದ್ಯ ಡಾ. ಶ್ರೀನಿವಾಸ್, ಹಿರಿಯ ಪತ್ರಕರ್ತ ಬಿ.ಪಿಳ್ಳರಾಜು, ಪ್ರಗತಿಪರ ಕೃಷಿಕ ಬೈಚಾಪುರ ರವಿಶಂಕರ್, ಕಲಾವಿದ ಡಾ. ದೇವನಹಳ್ಳಿ ದೇವರಾಜ್, ನಿವೃತ್ತ ಯೋಧ ರಾಮಚಂದ್ರಪ್ಪ, ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ್ ಹಾಗೂ ಹಿರಿಯ ಛಾಯಾಗ್ರ್ರಾಹಕರಾದ ಶಾಂತಮೂರ್ತಿ ಮತ್ತು ಹಾರೋಹಳ್ಳಿನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ರವಿ ಮಾತನಾಡಿ, ಈ ನಿಮಿತ್ತ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 25 ಛಾಯಾಗ್ರಹಕರು ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು.
ವಿಶ್ವಛಾಯಾಗ್ರಾಹಕರ ದಿನದ ಅಂಗವಾಗಿ ತಾಲೂಕು ಸಂಘದಿಂದ ವಿಜಯಪುರದ ಅಂಧರ ಶಾಲೆಯ ಮಕ್ಕಳಿಗೆ ಉಪಾಪಹಾರ, ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ, ದೃಷ್ಟಿ ಕಣ್ಣಾಸ್ಪತ್ರೆ, ಲಯನ್ಸ್ ಸಂಸ್ಥೆ ಹಾಗೂ ನಟರಾಜ ಪಾಲಿಕ್ಲಿನಿಕ್ ಸಹಯೋಗದಲ್ಲಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ, ಕೆಸಿ ಜನರಲ್ ಆಸ್ಪತ್ರೆಯ ರಕ್ತನಿಧಿಯ ಸಹಯೋಗದಲ್ಲಿ ರಕ್ತದಾನ ಶಿಬಿರ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಫೋಟೋಗ್ರಾರ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಸಂಘದ ಪದಾಧಿಕಾರಿಗಳಾದ ಗಿರೀಶ್, ಮಂಜುನಾಥ್, ಎಸ್. ವಿಜಯಕುಮಾರ್, ಮೂರ್ತಿ, ರಾಜು, ರಂಗಾಚಾರಿ, ಸುರೇಶ್, ಸುನಿಲ್, ಕೆಂಪತಿಮ್ಮನಹಳ್ಳಿ ನಾರಾಯಣಸ್ವಾಮಿ, ಪಿ.ಎಂ. ನಾರಾಯಣಸ್ವಾಮಿ, ಗೋವರ್ಧನ, ಪ್ರಕಾಶ ಡಿ.ಎನ್. ನಾರಾಯಣಸ್ವಾಮಿ ಇದ್ದರು.