ಸೈನಿಕರಿಗೆ ಮೋದಿ ಸರ್ಕಾರದಿಂದ ಆತ್ಮಸ್ಥೈರ್ಯ

kargil vijay divas
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೇಶ ಸೇವೆ ಮಾಡುವುದು ಹೆತ್ತ ತಾಯಿಯನ್ನು ಪೂಜಿಸಿದಂತೆ ಎಂದು ಮಾಜಿ ಯೋಧ ನಲ್ಲೂರು ರಾಮಚಂದ್ರ ಬಣ್ಣಿಸಿದರು.
ಪಟ್ಟಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಮಂದಿರದ ದೇವನಹಳ್ಳಿ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್‌ನಲ್ಲಿ ಮಾತನಾಡಿದರು.
ಸೇನೆಯಲ್ಲಿದ್ದಾಗ ಅನೇಕ ಬಾರಿ ಸಾವನ್ನು ಎದುರುಗೊಂಡ ಅನುಭವವಿದ್ದು, 25 ವರ್ಷಗಳ ಕಾಲ ದೇಶದಾದ್ಯಂತ ಸೇವೆ ಮಾಡಿದ್ದೇನೆ. ಸಹೋದ್ಯೋಗಿಗಳು ಕಣ್ಣೆದುರೇ ಬಲಿದಾನವಾದಾಗಲೂ ವಿಚಲಿತನಾಗದೆ ಹೋರಾಡಿದ್ದ ಘಟನೆ ಸ್ಮರಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಂದ ಬಳಿಕ ಸೈನ್ಯದ ಶಕ್ತಿ ವೃದ್ಧಿಯಾಯಿತು. ಸೈನಿಕರಿಗೆ ಹಗುರವಾದ ರಕ್ಷಣಾ ಸಾಧನಗಳನ್ನು ನೀಡಲಾಗಿದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಸೈನಿಕರಿಗೆ ನೀಡಿ, ಮತ್ತಷ್ಟು ಬಲ ಹಾಗೂ ಆತ್ಮವಿಶ್ವಾಸವನ್ನು ತುಂಬಿದ್ದು ಮೋದಿ ಸರ್ಕಾರ ಎಂದರು.
ದೇವನಹಳ್ಳಿಯ ನಿವೃತ್ತ ಯೋಧ ಬಾಲಕೃಷ್ಣ ಅವರ ಪರವಾಗಿ ಅವರ ಧರ್ಮ ಪತ್ನಿ ರಮಾ ಅವರು ಗೌರವಾರ್ಪಣೆ ಸ್ವೀಕರಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net