ಜೀವ ಉಳಿಸುವ ಮಾರ್ಗೋಪಾಯದ ತಿಳಿವಳಿಕೆ ಅಗತ್ಯ

health day
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಹೃದಯಾಘಾತವಾದಾಗ ತಕ್ಷಣಕ್ಕೆ ಜೀವ ಉಳಿಸುವ ಮಾರ್ಗೋಪಾಯಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿವಳಿಕೆ ಇರಬೇಕು ಎಂದು ಭಾರತೀಯ ಮಕ್ಕಳ ವೈದ್ಯಕೀಯ ಸಂಘದ ಬೆಂಗಳೂರು ಶಾಖೆ ಅಧ್ಯಕ್ಷ ಡಾ.ಎಸ್.ಎಂ.ಪ್ರಸಾದ್ ತಿಳಿಸಿದರು.
ಪಟ್ಟಣದ ಆಕಾಶ್ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ (ಸಿಪಿಆರ್) ದಿನಾಚರಣೆಯಲ್ಲಿ ಮಾತನಾಡಿದರು. ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತದಂಥ ತುರ್ತು ಸಂದರ್ಭದಲ್ಲಿ ಉಪಯುಕ್ತವಾಗಿದೆ. ಆ ಸಮಯದಲ್ಲಿ ಸಿಪಿಆರ್ ಮಾಡುವುದರಿಂದ ಹೃದಯವು ಪಂಪ್ ಮಾಡಲು ಪ್ರಾರಂಭಿಸುತ್ತದೆ, ರಕ್ತವು ದೇಹದಲ್ಲಿ ಹರಿಯಲು ಪ್ರಾರಂಭಿಸುತ್ತದೆ. ಇದು ಹೃದಯ ರೋಗಿಯ ಜೀವವನ್ನು ಉಳಿಸಬಹುದಾದ ಒಂದು ಪ್ರಾಥಮಿಕ ಚಿಕಿತ್ಸೆ. ಹಾಗಾಗಿ ವೈದ್ಯ ಸಿಬ್ಬಂದಿ ಜತೆಗೆ ಸಾರ್ವಜನಿಕರಿಗೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಹೃದಯಾಘಾತವಾದಾಗ ಮಿದುಳಿಗೆ ರಕ್ತ ಸಂಚಲನೆ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ರಕ್ತ ಸಂಚಲನೆ ಸರಾಗವಾಗುವಂತೆ ಮಾಡಬೇಕಾದರೆ ಸಿಪಿಆರ್ ಮಾಡಬೇಕು. ಇಲ್ಲವಾದರೆ ಮನುಷ್ಯನ ಮಿದುಳು ನಿಷ್ಕ್ರಿಯವಾಗಬಹುದು ಅಥವಾ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದರು.
ಡಾ.ರೂಪಾ ಲೋಕೇಶ್, ಡಾ.ವಿಜಯ, ಡಾ.ಚೇತನ್, ಡಾ.ಶರೀಪ್, ಡಾ.ಅಡ್ಲಿನ್, ಡಾ.ರಾಜ್‌ಕುಮಾರ್, ಮಕ್ಕಳ ತಜ್ಞ ಕಿಶೋರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net