ದೇವಿ ಆರಾಧನೆಯಿಂದ ಮನಸ್ಸಿಗೆ ಶಾಂತಿ

07 Ylb02
ಯಲಬುರ್ಗಾ ತಾಲೂಕಿನ ಯಾಪಲದಿನ್ನಿ ಮಾರುತೇಶ್ವರ ದೇವಸ್ಥಾನದಲ್ಲಿ ಆರಂಭವಾದ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶಿವನಗೌಡ ಹಿರೇಗೌಡ್ರ ಮಾತನಾಡಿದರು. ಗಾಯಕರಾದ ಮೈಲಾರಪ್ಪ ಕಿತ್ತಲಿ, ಹನುಮಂತಪ್ಪ ಕವಳಕೇರಿ, ತಬಲಾ ವಾದಕ ಕೃಷ್ಣ ಗಜೇಂದ್ರಗಡ ಇದ್ದರು.
Published on

ಯಲಬುರ್ಗಾ: ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸಾಮರಸ್ಯಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಪ್ರವಚನಕಾರ ಶಿವನಗೌಡ ಹಿರೇಗೌಡ್ರ ಹೇಳಿದರು.

ತಾಲೂಕಿನ ಯಾಪಲದಿನ್ನಿ ಮಾರುತೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಇತ್ತೀಚಿಗೆ ಆರಂಭವಾದ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯದಶಮಿ ಹಿನ್ನೆಲೆಯಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ವ್ಯಕ್ತಿಗಳ ಅರ್ಥಪೂರ್ಣ ಬದುಕಿನ ವಿಧಾನವನ್ನು ಮನನ ಮಾಡಿಕೊಳ್ಳಬೇಕು. ದಸರಾ ಹಬ್ಬದಲ್ಲಿ ದೇವಿ ಆರಾಧನೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ. ಆಧ್ಯಾತ್ಮಿಕ ಜೀವನದಿಂದ ಬದುಕು ಹಸನಾಗುತ್ತದೆ. ಎಲ್ಲರೂ ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದೆ ಸಾಗಬೇಕು ಎಂದರು.

ಗಾಯಕ ಮೈಲಾರಪ್ಪ ಕಿತ್ತಲಿ ದೇವಿ ಸ್ತೋತ್ರಪಠಣ ಮಾಡಿದರು. ಗಾಯಕ ಹನುಮಂತಪ್ಪ ಕವಳಕೇರಿ, ತಬಲಾ ವಾದಕ ಕೃಷ್ಣ ಗಜೇಂದ್ರಗಡ ಸಂಗೀತ ಸೇವೆಗೈದರು. ಅರ್ಚಕ ವಿರೂಪಾಕ್ಷ ಬಡಿಗೇರ್, ಪ್ರಮುಖರಾದ ಯಮನೂರಪ್ಪ ವಿಶ್ವಕರ್ಮ, ಕೇದರನಾಥ ಹಿರೇಮಠ, ಕಳಕಯ್ಯ ಬಳ್ಳೊಳ್ಳಿ,

ಪ್ರಭುದೇವ ಮೇಟಿ, ನಿಂಗಯ್ಯ ಬಳ್ಳೊಳ್ಳಿ, ಹೊನ್ನಪ್ಪ ವಾಲ್ಮೀಕಿ, ಹನುಮಂತಪ್ಪ ಹಟ್ಟಿ, ಕಳಕಯ್ಯ ಹಿರೇಮಠ, ಶಂಕರಗೌಡ ಪಾಟೀಲ್, ಕನಕರಾಯ ವಾಲ್ಮೀಕಿ, ಯಮನೂರಪ್ಪ ದಿಪಾಲಿ, ತಿಮ್ಮನಗೌಡ ಪಾಟೀಲ್, ಬಾಬುಸಾಬ್ ದೋಟಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net