ಅನ್ನಪೂರ್ಣೆಶ್ವರಿ ಮಂದಿರದಲ್ಲಿ 43ನೇ ವರ್ಷದ ದೇವಿ ಪುರಾಣ

18GDG07
ಗದಗ ನಗರದ ಅಡವೀಂದ್ರ ಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಜರುಗಿತು. ರಾಜಗುರು ಗುರುಸ್ವಾಮಿ ಕಲಕೇರಿ ಗವಾಯಿಗಳು, ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಪ್ರಮೀಳಾದೇವಿ ಬಳಿಗಾರ, ಬಸವರಾಜ ಪಲ್ಲೇದ, ವಿ. ಎಂ. ಕುಂದ್ರಾಳಹಿರೇಮಠ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ದಸರಾ ಸಂದರ್ಭದಲ್ಲಿ ದೇವಿಯ ಪುರಾಣವನ್ನು ಶೃಧ್ದೆಭಕ್ತಿಯಿಂದ ಪಠಣ ಮಾಡಿದವರ ಜೀವನ ಪಾವನಗೊಳ್ಳುವದು ಎಂದು ಖ್ಯಾತ ಗಾಯಕ, ಸಂಗೀತ ತ, ಸಾಹಿತಿ ಡಾ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಗವಾಯಿಗಳು ಹೇಳಿದರು.
ಗದಗ ನಗರದ ಅಡವೀಂದ್ರ ಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿ ದಸರಾ ಜಾತ್ರಾ ಮಹೋತ್ಸವ ನಿಮಿತ್ಯ ಬುಧವಾರ ಏರ್ಪಡಿಸಿದ್ದ ದೇವಿ ಪುರಾಣ ಪ್ರವಚನ ನಡೆಸಿ ಅವರು ಮಾತನಾಡಿದರು.
ಆಧುನಿಕ ಯುಗ, ವಿಜ್ಞಾನ ತಂತ್ರಜ್ಞಾನ ಎಷ್ಟೇ ಪ್ರಗತಿ ಸಾಧನೆ ಆಗಿದ್ದರೂ ಸಹ ನಾವಿಂದು ಭಾರತೀಯ ಸಂಸತಿ, ಸಂಸ್ಕಾರ, ಪರಂಪರೆಯನ್ನು ಪರಿಪಾಲಿಸಲೇಬೇಕಿದೆ. ಹಿರಿಯರು, ದಾರ್ಶನಿಕರು, ಅನುಭಾವಿಗಳು ತಮ್ಮ ಅನುಭವ ಮತ್ತು ವಿಜ್ಞಾನದ ಆಧಾರದ ಮೇಲೆ ಸಂಪ್ರದಾಯ, ಆಚಾರ ವಿಚಾರಗಳನ್ನು ಮಾಡಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪಾವನಗೊಳ್ಳುತ್ತದೆ ಎಂದರು.
ಕಳೆದ 43 ವರ್ಷಗಳಿಂದ ನಿರಂತರವಾಗಿ ದೇವಿ ಪುರಾಣ ನಡೆಸಿಕೊಂಡು ಬಂದಿರುವದು ಇಲ್ಲಿನ ವಿಶೇಷ. ಪ್ರತಿ ತಿಂಗಳು ಶಿವಾನುಭವ ಗೋಷ್ಠಿ ಏರ್ಪಡಿಸಿ ಜನತೆಯಲ್ಲಿ ಜಾಗೃತಿ, ಧರ್ಮಜಾಗೃತಿ, ವೈಚಾರಿಕತೆಯನ್ನು ಮೂಡಿಸುವ ಮೂಲಕ ಸಂಗೀತ, ಸಾಹಿತ್ಯ, ಸಾಂಸತಿಕ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದ್ದು ಇತಿಹಾಸ. ಶ್ರೀಮಠದ ಧರ್ಮದಶಿರ್ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸೇರಿದಂತೆ ಅವರ ಸಹೋದರರು ಸಮಾಜಮುಖಿ ಕಾರ್ಯ ಮಾಡುತ್ತಿರುವದು ಶ್ಲಾನೀಯ ಎಂದರು.
ಧರ್ಮದಶಿರ್ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಸಮ್ಮುಖ ವಹಿಸಿದ್ದರು. ಪ್ರಮೀಳಾದೇವಿ ಬಳಿಗಾರ, ಬಸವರಾಜ ಪಲ್ಲೇದ, ವಿ. ಎಂ. ಕುಂದ್ರಾಳಹಿರೇಮಠ, ಜಗನ್ನಾಥ ಕಲಬುಗಿರ್, ಗುರುನಾಥ ಸುತಾರ, ಎಸ್​. ಬಿ. ಭಜಂತ್ರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net