

ಬೈಲಹೊಂಗಲ: ಪಟ್ಟಣದ ಪತ್ರಿಬಸವ ನಗರ ಶ್ರೀ ಕರೆಮ್ಮದೇವಿಯ ದೇವಸ್ಥಾನದ ನೂತನ ಪಲ್ಲಕ್ಕಿ ಉತ್ಸವ ಹಾಗೂ ದೇವಿ ಮೂರ್ತಿ ಲೋಕಾರ್ಪಣೆ ಅ.2ರಂದು ಜರುಗುವುದು.ಬೆಳಗ್ಗೆ 6ಕ್ಕೆ ಹೋಮ&ಹವನ, ಅಭಿಷೇಕ, ಕುಂಕುಮಾರ್ಚನೆ ನಡೆಯಲಿದೆ. 9ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಉತ್ಸವ ಮೂರ್ತಿಯ ಕುಂಭಮೇಳ ಮೆರವಣಿಗೆ ನಡೆಯಲಿದೆ. ನೇಗಿಲ ಯೋಗಿ ರಾಜ್ಯ ರೈತ ಸೇವಾ ಸಂದ ಜಿಲ್ಲಾಧ್ಯ ಶಂಕರ ಬೋಳಣ್ಣವರ ಚಾಲನೆ ನೀಡುವರು. ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪುರಸಭೆ ಅಧ್ಯ ವಿಜಯ ಬೋಳಣ್ಣವರ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯ ಪ್ರಮೋದಕುಮಾರ ವಕ್ಕುಂದಮಠ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಯಡಳ್ಳಿ, ಗುತ್ತಿಗೆದಾರ ಮಂಜುನಾಥ ಹಿರೇಮಠ, ಪುರಸಭೆ ಸದಸ್ಯ ಅರ್ಜುನ ಕಲಕುಟಕರ ಆಗಮಿಸುವರು ಎಂದು ಕರೆಮ್ಮದೇವಿ ಸೇವಾ ಅಭಿವೃದ್ಧಿ ಸಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.