ಅನ್ನಪೂರ್ಣೇಶ್ವರಿದೇವಿ ಮತ್ತು ಭೀಮಾಂಬಿಕಾದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ

IMG-20240405-WA0004
Published on

ಗದಗ‌: ತಾಲ್ಲೂಕಿನ ಚಿಕ್ಕಹಂದಿಗೋಳ ಗ್ರಾಮದಲ್ಲಿ ಅನ್ನಪೂರ್ಣೇಶ್ವರಿದೇವಿ ಮತ್ತು ಭೀಮಾಂಬಿಕಾದೇವಿಯ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಪೂಜ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಬ್ರಹನ್ಮಠ, ಅಡ್ನೂರು-ಗದಗ ಇವರಿಂದ ಅದ್ದೂರಿಯಾಗಿ ಜರುಗಿತು.

ದಿ. ೩ ರಂದು ಗ್ರಾಮದ ಹೊರ ವಾಸ್ತವ್ಯ ಗ್ರಾಮದೇವತೆಯ ಕಟ್ಟಿ ಕಾರ್ಯಕ್ರಮದಲ್ಲಿ‌ ಪ್ರವಚನ, ಭಜನೆ, ಡೊಳ್ಳು ಹಾಗೂ ಜಾಗರಣೆ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಿದವು, ದಿ. ೪ರಂದು ಮೌನೇಶ್ವರ ಸ್ವಾಮಿಗಳು ಉಲಗೂರ ಇವರಿಂದ ಬ್ರಾಹ್ಮಿ ಮೂರ್ತದಲ್ಲಿ ಗಣಹೋಮ ನಂತರ ಸಕಲ ಮಂಗಲ ವಾದ್ಯಮೇಳದೊಂದಿಗೆ ಮೆರವಣಿಗೆ, ಪುರ ಪ್ರವೇಶ ಹಾಗೂ ಗೋದೂಳಿ ಮುಹೂರ್ತದಲ್ಲಿ ಗದ್ದುಗೆಗೆ ಮೂರ್ತಿಗಳ ಪುನರ್ ಜೋಡಣೆ ಕಾರ್ಯಕ್ರಮ ಜರುಗಿತು.
ದಿ. ೫ರಂದು ಬ್ರಾಹ್ಮಿ ಮೂರ್ತದಲ್ಲಿ ಚಂಡಿಕಾ ಹೋಮ-ಹವನ ನಂತರ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಈ ವೇಳೆಯಲ್ಲಿ ಚಿಕ್ಕಹಂದಿಗೋಳ ಗ್ರಾಮದ ಸಮಸ್ತ ಸದ್ಬಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net