

ರಾಯಚೂರು ಡಾ.ಬಿ.ಆರ್.ಅಂಬೇಡ್ಕರ ಅವರು ದೂರದೃಷ್ಟಿಯ ಸಂವಿಧಾನ ದೇಶದ ಜನರಿಗೆ ಅಭಯ ಮತ್ತು ಅಭಾವ ಮುಕ್ತಿಯನ್ನು ನೀಡಿತ್ತು. ಆದರೆ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಿ ಸಂವಿಧಾನ ಆಶಯಗಳಿಗೆ ವಿರುದ್ದವಾದ ಬೆಳವಣಿಗೆಗಳು ನಡೆಯುತ್ತಿವೆಂದು ಸಮಾಜಿಕ ಚಿಂತಕ ದಲೀಪ್ ಕಾಮತ್ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಹೈದ್ರಬಾದ ಕರ್ನಾಟಕ ಜನಾಂದೋಲನ ಕೇಂದ್ರದಿಂದ ಆಯೋಜಿಸಲಾಗಿದ್ದ ಎರಡನೇ ದಿನದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾರತ ಪರಿಕಲ್ಪನೆ, ವ್ಯವಸ್ಥೆ ಜನಬದುಕಿನ ವೈದ್ಯರುಗಳು ವಿಷಯದ ಕುರಿತು ಮಾತನಾಡಿ, ಸ್ವಾತಂತ್ರ್ಯ ನಂತರ ದೇಶದ ಅತಿ ದೊಡ್ಡ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು ಎಂದು ಸಂತಸದಲ್ಲಿದ್ದವರಿಗೆ ಬಂಡವಾಳಶಾಹಿ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿ ಪಡೆದಿದೆ.
ದೇಶದ ಜನರಿಗೆ ಉದ್ಯೋಗ ಖಾತ್ರಿ ಪಡೆಯಲು 55 ವರ್ಷ ಬೇಕಾಯಿತು. ಆರೋಗ್ಯ,ಶಿಕ್ಷಣ ಕಾಯ್ದೆಗಳಿದ್ದರೂ ಅಸ್ಥಿರಗೊಳಿಸಲಾಗಿದೆ. ದೇಶದ ಜನರು ಪ್ರಜಾಪ್ರಭುತ್ವ ಪಡೆದ ಸಂಬ್ರಮದಲ್ಲಿ ಜವಬ್ದಾರಿಯನ್ನೇ ಮರೆತು ಬಿಟ್ಟರು. ಇಂದು ಮಾತನಾಡುವದು ಅಪರಾಧವಾಗಿ ಭಯಗ್ರಸ್ಥ ಪ್ರಜಾಪ್ರಭುತ್ವದಲ್ಲಿ ಇರುವಂತಾಗಿದೆ. ಕಳೆದು ಹೋದ 70 ವರ್ಷಗಳ ಪ್ರಜಾಪ್ರಭುತ್ವ ಸುಳ್ಳು ಮಾಡುವ ಕೆಲಸ ನಡೆಯುತ್ತಿದೆ ಎಂದರು.
ಬಡ,ಮಧ್ಯಮ ವರ್ಗದ ಜನರು ನರೇಂದ್ರ ಮೋದಿ ಆಡಳಿತದಲ್ಲಿ ಪರಿವರ್ತನೆ ಹೆಸರಿನಲ್ಲಿ ಅಭದ್ರಗೊಳಿಸುವ ಕೆಲಸ ಮಾಡಿದ್ದಾರೆ. ವ್ಯವಸ್ಥೆ ಬದಲಾಗದ ಹೊರತು ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಿಲ್ಲ. ಜನರು ಯಾಆಯ್ಕೆ ಮಾಡುತ್ತೇವೆ ಎನ್ನುವದು ಮುಖ್ಯವಾಗುತ್ತದೆಂದರು.
ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಪಕ್ಷ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ವೈಫಲ್ಯಕ್ಕೆ ಜಾತಿ,ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವೂ ಕಾರಣವಾಗಿದೆ. ಒಗ್ಗಟ್ಟು ಒಡೆಯುವ ಕೆಲಸದೊಂದಿಗೆ ಬಂಡವಾಳಶಾಹಿತ ಕುತಂತ್ರಕ್ಕೆ ವ್ಯವಸ್ಥೆಯೇ ಬಲಿಯಾಗಿದೆ. ನರೇಂದ್ರ ಮೋದಿ ಸರ್ಕಾರ ನಿರ್ಧಾರಗಳನ್ನು ಐಎಂಎಫ್, ವಿಶ್ವಸಂಸ್ಥೆ ಮಾಡುತ್ತಿದೆ. ಹೆದ್ದಾರಿ ರಸ್ತೆ, ವಿಮಾನ ನಿಲ್ದಾಣಗಳ ಹೆಸರಿನಲ್ಲಿ ಸಾವಿರಾರು ಕೋಟಿ ಅಪವ್ಯಯ ಮಾಡುವಸರ್ಕಾರಗಳು ರೈತರು ಬೆಳೆದ ಬೆಳೆಗೆ ಬೆಲೆ ನೀಡಲು ಮುಂದಾಗುತ್ತಿಲ್ಲ.
ಸ್ವಾತಂತ್ರ್ಯ ನಂತರ ದೇಶದಲ್ಲಿ 35 ಸಾವಿರ ಕೋಟಿ ಜನಸಂಖ್ಯೆಯಿದ್ದರೆ ಆಹಾರಕ್ಕಾಗಿ ಅಮೆರಿಕಾದಿಂದ ಗೋದಿ ತರಿಸಿ ವಿತರಿಸಲಾಗುತ್ತಿತ್ತು. ಆದರಿಂದು ದೇಶ 144 ಸಾವಿರ ಕೋಟಿ ಜನಸಂಖ್ಯೆ ಹೊಂದಿದರು ಆಹಾರ ಸ್ವಾವಲಂಬನೆಯಿದ್ದು ವಿದೇಶಿಗಳಿಗೆ ರಫ್ತು ಮಾಡಲಾಗುತ್ತಿದೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿನನಿರ್ಮಾಣ ಮಾಡಿದ್ದೇ ಸರ್ಕಾರಗಳು ಎಂದರು.
ಈ ಸಂದರ್ಭದಲ್ಲಿ ಸಹಸ್ಪಂದನಾ ಸಂವಾದಕ ಡಾ.ರಿಯಾಜುದ್ದೀನ್, ವೀರಣ್ಣ ಬಂಡಾರಿ, ಮೌನೇಶ ಗೋನಾಳ, ವಿಜಯಕುಮಾರ, ಶಿವುಕುಮಾರ, ಶ್ರೀಶೈಲ ಅಲದಹಳ್ಳಿ,ಸುಧಾ ಪಾಟೀಲ್,ಡಾ.ಅರುಣಾ ಹಿರೇಮಠ ಇದ್ದರು.