ಅಧಿಕಾರ ಅಲ್ಲ, ಅಭಿವೃದ್ಧಿ ಕಾರ್ಯಗಳೇ ಶಾಶ್ವತ

26MTG1
ಮೊರಟಗಿ ಗ್ರಾಮದ ಜನತಾ ಕಾಲನಿಯಲ್ಲಿ ಕೈಗೊಂಡ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿಪೂಜೆ ನೆರವೇರಿಸಿದರು. ಜಿ.ಪಂ. ಮಾಜಿ ಸದಸ್ಯ ಎನ್. ಆರ್. ತಿವಾರಿ, ಎಂ.ಕೆ. ಕಣ್ಣಿ, ಎಂ.ಟಿ. ಸಿಂಗೆ, ವೀರನಗೌಡ ಪಾಟೀಲ ಇತರರಿದ್ದರು.
Published on

ಮೊರಟಗಿ: ಅಧಿಕಾರ ಶಾಶ್ವತವಲ್ಲ, ನಮ್ಮ ಅಧಿಕಾರಾವಧಿಯಲ್ಲಿ ಜಾತ್ಯತೀತವಾಗಿ ಮಾಡಿದ ಅಭಿವೃದ್ಧಿ ಕಾಮಗಾರಿಗಳೇ ಶಾಶ್ವತ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಗ್ರಾಮದ ಜನತಾ ಕಾಲನಿಯಲ್ಲಿ 2023-24ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ ಮಂಜೂರಾದ 40 ಲಕ್ಷ ರೂ. ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಗ್ರಾಮದಲ್ಲಿ ಈಗಾಗಲೇ ಕೆರೆ ಅಭಿವೃದ್ಧಿಗಾಗಿ 1.50 ಕೋಟಿ, ಶಾದಿ ಮಹಲ್ ನಿರ್ಮಾಣಕ್ಕಾಗಿ 1 ಕೋಟಿ ರೂ. ಮಂಜೂರಾಗಿದ್ದು ಕಾರ್ಯ ಪ್ರಗತಿಯಲ್ಲಿದೆ. ಸದ್ಯಕ್ಕೆ ಜನತಾ ಕಾಲನಿಗೆ ತೆರಳುವ ಸಿಸಿ ರಸ್ತೆಗೆ 40 ಲಕ್ಷ ರೂ., ಸಮುದಾಯ ಅರೋಗ್ಯ ಕೇಂದ್ರಕ್ಕೆ ಹೋಗುವ ಮುಖ್ಯರಸ್ತೆಗೆ 15 ಲಕ್ಷ ರೂ. ಹಾಗೂ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 15 ಲಕ್ಷ ಮಂಜೂರು ಮಾಡಿಸಿದ್ದು, ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಮೋರಟಗಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುತ್ತೇನೆ ಎಂದರು.

ಜಿ.ಪಂ. ಮಾಜಿ ಸದಸ್ಯ ಎನ್. ಆರ್. ತಿವಾರಿ, ಎಂ.ಕೆ. ಕಣ್ಣಿ, ಎಂ. ಟಿ. ಸಿಂಗೆ, ವೀರನಗೌಡ ಪಾಟೀಲ, ಡಾ. ಗಿರೀಶ ಪಾಟೀಲ, ಸಲೀಮ್ ಕಣ್ಣಿ, ರಜಾಕ್ ಭಾಗವಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net