

ರಾಯಚೂರು ಮಹಾನಗರ ಪಾಲಿಕೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲವೆಂದು ಪಾಲಿಕೆಯ ಬಿಜೆಪಿ ಸದಸ್ಯರು ಆರೋಪಿಸುತ್ತಿರುವದು ಸರಿಯಾದ ಕ್ರಮವಲ್ಲ. ಪಾಲಿಕೆ ಆಯುಕ್ತ ಹಾಗೂ ಅಧ್ಯಕ್ಷರ ನೇತೃತ್ವದಲ್ಲಿ ಅಭಿವೃದ್ದಿಯಾಗುತ್ತಿದೆಂದು ಆರ್‌ಡಿಎ ಅಧ್ಯಕ್ಷ ಹಾಗೂ ಪಾಲಿಕೆ ಅಧ್ಯಕ್ಷೆರ ಪತಿ ನರಸಿಂಹಲು ಮಾಡಗಿರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದಾರ್ಜೆಗೆರಿಸಿದ ಮೇಲೆ ಮೂರು ಸಾಮಾನ್ಯ ಸಭೆಗಳನ್ನು ನಡೆಸಲಾಗಿದೆ. ಮಾ.18 ರಂದು ಒಂದು ಬಜೆಟ್ ಸಭೆ ನಡೆಸಲಾಗಿದೆ. ನಗರದ ಸ್ವಚ್ಚತೆಗೆ 411 ಪೌರ ಕಾರ್ಮಿಕರು, 10 ಜನ ಮೇಲ್ವಿಚಾಕರು, 78 ಆಟೋ ಟಿಪ್ಟರ್‌ಗಳು, 21 ಟಿಪ್ಟರ್‌ಗಳು, ಮೂರು ಜೆಸಿಬಿ, ಮೂರು ದೊಡ್ಡ ಜೆಸಿಬಿಗಳಿಂದ ನಿತ್ಯವೂ ಕಸ ವಿಲೇವಾರಿ ನಡೆಸಲಾಗುತ್ತಿದೆ. ಹರಿಜನವಾಡದಿಂದ ಸಿಯಾತಲಾಬ್‌ವರಗೆ ರಾಜ್ ಕಾಲುವೆ ಹೂಳು ತೆಗೆಯುವ ಕೆಲಸ ನಡೆಸಿದ್ದರಿಂದ ನೀರು ನುಗ್ಗುವದನ್ನು ತಡೆಯಲು ಸಹಕಾರಿಯಾಗಿದೆ ಎಂದರು.
ನಗರದ ಮುಖ್ಯ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಬೀದಿದೀಪಗಳ ಅಳವಡಿಕೆ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡಲಾಗಿದೆ. ಜನರಿಗೆ ಶುದ್ದ ಕುಡಿಯುವ ನೀರು ಪೂರೈಸಲು ನೀರು ಪರೀಕ್ಷೆ ಮಾಡಿ ಪೂರೈಸಲಾಗುತ್ತದೆ. ಒಂದು ಕೋಟಿ ರೂ.ವೆಚ್ಚದಲ್ಲಿ ಪೌರ ಕಾರ್ಮಿಕರಿಗೆ ವಿಮಾ ಯೋಜನೆ, ದಿನಗೂಲಿ ನೌಕರರಿಗೆ 50 ಲಕ್ಷ ರೂ. ವಿಮಾ ಯೋಜನೆ ರೂಪಿಸಲಾಗಿದೆ. ಪೌರ ಕಾರ್ಮಿಕರ ಮಕ್ಕಳಿಗೆ 10 ಲಕ್ಷ ರೂ. ಶಿಕ್ಷಣ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಸ್ವಚ್ಚ ಭಾರತ ಯೋಜನೆಯಡಿ 1.7 ಕೋಟಿ ರೂ.ಯಂತ್ರೋಪಕರಣ ಖರೀದಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಚತೆಗೆ 15 ನೇ ಹಣಕಾಸು ಯೋಜನೆಯಡಿ 3.95 ಕೋಟಿ ರೂ. ಯರಮರಸ್ ಬಳಿ ದನಗಳ ಶವಗಾರ ನಿರ್ಮಾಣಕ್ಕೆ 8 ಕೋಟಿ ಪ್ರಸ್ತಾವನೆಗೆ ಅನುಮೋದನೆ ಪಡೆಯಲಾಗಿದೆ ಎಂದರು.
ಪಾಲಿಕೆಗೆ ಇ-ಖಾತಾಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ 87,890 ಖಾತಾಗಳನ್ನು ವಿತರಿಸಲಾಗಿದ್ದು, 50,379 ಅರ್ಜಿಗಳು ಬಾಕಿಯಿವೆ. 37,511 ಇ-ಖಾತಾಗಳನ್ನು ಬಾಕಿ ಆಸ್ತಿಗಳೆಂದು ಪರಿಗಣಿಸಲಾಗಿದೆ. ಆದರೆ ಬಿಜೆಪಿ ನಾಯಕರು ಆರೋಪಿಸಿರುವಂತೆ ಕೆಲವಡೆ ಸರ್ಕಾರಿ ಭೂಮಿ, ಕೆರೆ ಸ್ಥಳಗಳೆಂದು ಪಹಣಿಗಳಲ್ಲಿರುವದರಿಂದ ಸಮಸ್ಯೆಯಾಗಿದ್ದು ನಿವಾರಣೆಗೆ ಕಂದಾಯ ಸಚಿವರಲ್ಲಿ ಮನವಿ ಮಾಡಲಾಗಿದ್ದು, ಇ-ಖಾತಾ ನಿಂತು ಹೋಗಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎನ್.ಶ್ರೀನಿವಾಸ ರೆಡ್ಡಿ,ಬಸವರಾಜ ದಾದೂರು,ತಿಮಪ್ಪ ನಾಯಕ,ಜಿಂದಪ್ಪ ಇದ್ದರು.