

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 27 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಸೋಮವಾರ ಚಾಲನೆ ನೀಡಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಮುಜರಾಯಿ ಇಲಾಖೆಯ ವಿಶೇಷ ಅನುದಾನದಲ್ಲಿ ವಾರ್ಡ್ ನಂ.6 ರ ಗೋಕುಲಂ ಬಡಾವಣೆಯಲ್ಲಿರುವ ಶ್ರೀರಾಮಮಂದಿರ ಕಟ್ಟಡದ ಜೀರ್ಣೋದ್ಧಾರ ಕಾಮಗಾರಿಗೆ (17 ಲಕ್ಷ ರೂ. ಅನುದಾನ) ಭೂಮಿಪೂಜೆ ನೆರವೇರಿಸಿದರು.
ವಾರ್ಡ್ ನಂ.18 ರ ವ್ಯಾಪ್ತಿಯ ಯಾದವಗಿರಿ ಬಡಾವಣೆಯ ಕೆಆರ್‌ಎಸ್ ರಸ್ತೆಯಲ್ಲಿಯಲ್ಲಿ (ಹಸುಕರು ಪಾರ್ಕ್ ಮುಂಭಾಗ) 10 ಲಕ್ಷ ರೂ. ಅನುದಾನದಲ್ಲಿ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿದರು.
ಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು, ನಾಮ ನಿರ್ದೇಶಿತ ಸದಸ್ಯ ಚಿಕ್ಕವೆಂಕಟ, ಮಾಜಿ ಸದಸ್ಯ ದೇವರಾಜು, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರರಾಜು, ಉಪಾಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದರ್ಶಿ ಪುನೀತ್, ಬಿಎಲ್‌ಎ-1 ದಿನೇಶ್ ಗೌಡ, ವಾರ್ಡ್ ಅಧ್ಯಕ್ಷ ಅಶೋಕ್, ಮುಖಂಡರಾದ ಮಾಧವರಾವ್, ರಂಗಸ್ವಾಮಿ, ಡೆಟಾಲ್ ರವಿ, ಪ್ರಸನ್ನ, ಸಿ.ಡಿ.ಕುಮಾರ್, ಪ್ರಕಾಶ್, ಭರತ್, ಹನುಮಂತು, ಕೃಷ್ಣಪ್ಪ, ಇಂದ್ರೇಶ್, ಕುಮಾರ್, ಅರವಿಂದ ಇತರರು ಇದ್ದರು.