ಅಭಿವೃದ್ಧಿ ಕಾರ್ಯ ಸಹಿಸದೇ ಕೃತ್ಯ

Development work is not tolerated
Published on

ರಟ್ಟಿಹಳ್ಳಿ: ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಪಟ್ಟಣದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶ್ರದ್ಧಾಂಜಲಿ ಅರ್ಪಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಭಾರತ ದೇಶದ ಹಿಂದುಗಳು ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿರುವ ಸಂದರ್ಭದಲ್ಲಿ ಉಗ್ರವಾದಿಗಳು ಹತ್ಯೆ ಮಾಡಿರುವುದು ನೋವಿನ ಸಂಗತಿ. ಈ ಉಗ್ರರು ಪಾಕಿಸ್ತಾನದವರಾಗಿದ್ದಾರೆ. ಈ ಉಗ್ರರಿಗೆ ತಕ್ಕ ಶಿಕ್ಷೆಯನ್ನು ಕೇಂದ್ರ ಸರ್ಕಾರ ನೀಡಬೇಕು. ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಉಗ್ರರು ದಾಳಿ ನಡೆಸಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಜೆ.ಪಿ. ಪ್ರಕಾಶ, ಸುಶೀಲ ನಾಡಗೇರ, ಶಂಭಣ್ಣ ಗೂಳಪ್ಪನವರ, ಹನುಮಂತಪ್ಪ ಗಾಜೇರ, ಸಂದೀಪ ಪಾಟೀಲ, ವೀರನಗೌಡ ಯಡಚಿ, ಮನೋಜ ಗೋಣೆಪ್ಪನವರ, ಸಿದ್ದು ಪಾಟೀಲ, ಸಿದ್ದೇಶ ಹಲಗೇರಿ, ಮಂಜು ತಳವಾರ, ಮಾಲತೇಶ ಬೆಳಕೇರಿ, ರಾಜು ಪಾಟೀಲ, ರುದ್ರಪ್ಪ ಬೆನ್ನೂರು, ಬಸವರಾಜ ಕಟ್ಟೀಮನಿ, ರವಿ ಮುದ್ದಣ್ಣನವರ, ಶಿವಕುಮಾರ ಉಪ್ಪಾರ, ಸಿದ್ದು ಸಾವಕ್ಕಳವರ, ಸಿದ್ದಪ್ಪ ಹರಿಜನ, ಸುರೇಶ ತೋಟಗಂಟಿ, ಶ್ರಾವಣ ಪರ್ವತಸಿದ್ದಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net