

ನರಗುಂದ: ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ನಿಷ್ಟ್ರೀಯಗೊಂಡಿದೆ. ವಿಪಕ್ಷದವರಷ್ಟೇ ಅಲ್ಲ. ಕಾಂಗ್ರೆಸ್ ಶಾಸಕರೇ ನಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನರಗುಂದ-ಅಳಗವಾಡಿ ರಸ್ತೆ ಸುಧಾರಣೆಗಾಗಿ 2.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ತಾಲೂಕಿನ ಹುಣಸೀಕಟ್ಟಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಗುತ್ತಿಗೆದಾರರು ಉತ್ತಮ ಕೆಲಸ ನಿರ್ವಹಿಸಬೇಕು. ಗುತ್ತಿಗೆದಾರರಿಗೆ ಗ್ರಾಮಸ್ಥರು ಸಹಕಾರ ನೀಡುವ ಮೂಲಕ ಕಾಮಗಾರಿ ನಡೆಸಲು ಸಹಕರಿಸಬೇಕು ಎಂದರು.
ಹುಣಸೀಕಟ್ಟಿ ಗ್ರಾಮದ ಆರ್.ಬಿ. ಅಳಗವಾಡಿ ಮಾತನಾಡಿದರು. ಬಸನಗೌಡ ಪಾಟೀಲ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಮಲ್ಲಪ್ಪ ಮೇಟಿ. ಬಿ.ಎಸ್. ಪಾಟೀಲ, ನವೀನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶೋಭಾ ಮುಳ್ಳೂರ, ಉಪಾಧ್ಯಕ್ಷೆ ಶಾಂತವ್ವ ದೇವಕ್ಕಿ, ಹನುಮಂತಗೌಡ ದ್ಯಾವನಗೌಡ್ರ, ಗೋವಿಂದ್ರರಡ್ಡಿ ಸಿದ್ನಾಳ, ಅನೀಲ ಧರೆಯಣ್ಣವರ, ಜಿ.ಎಂ. ಹುಡೇದಮನಿ, ಶೇಖಪ್ಪ ಕುರಿ, ಕುಬೇರಗೌಡ ಪಾಟೀಲ, ಷಣ್ಮುಖಗೌಡ ಪಾಟೀಲ, ಬಸವಂತಪ್ಪ ಅಂಗಡಿ, ಕೆ.ಎಸ್. ಖಾನಾಪೂರ, ಎಂ.ಎಫ್. ಆಡೀನ, ವೀರೇಶ ಚುಳಕಿ, ಉಪಸ್ಥಿತರಿದ್ದರು.