ಅಭಿವೃದ್ಧಿ ಕೆಲಸಗಳು ಮಾಡಿದ ರಾಯರೆಡ್ಡಿ

13ylb photo03
ಯಲಬುರ್ಗಾ, ಕುಕನೂರ ತಾಲೂಕುಗಳಿಗೆ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಂಜೂರಾದ ಹಿನ್ನೆಲೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್‌ದಿಂದ ಬುಧವಾರ ಸಂಭ್ರಮೋತ್ಸವ ಆಚರಣೆ ಮಾಡಲಾಯಿತು.
Published on

ಯಲಬುರ್ಗಾ: ಶಾಸಕ ಬಸವರಾಜ ರಾಯರೆಡ್ಡಿ ಅವರು ಸಚಿವರಾಗದಿದ್ದರೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳ ಮಹಾಪೂರವೇ ಹರಿದು ಬಂದಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಯಂಕಣ್ಣ ಯರಾಶಿ ಹೇಳಿದರು.

ಯಲಬುರ್ಗಾ, ಕುಕನೂರ ತಾಲೂಕಿಗಳಿಗೆ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಂಜೂರಾದ ಹಿನ್ನೆಲೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

37ಕೋಟಿ ಅನುದಾನದಲ್ಲಿ ಕಟ್ಟಡ ಕಾರ್ಮಿಕ ಮಕ್ಕಳಿಗೆ ವಸತಿ ಶಾಲೆ, ತಾಳಕೇರಿ ಮೂರಾರ್ಜಿ ದೇಸಾಯಿ ವಸತಿ ಶಾಲೆ ಕಾಲೇಜ್ ಅಗಿ ಉನ್ನತೀಕರಣ, 13ಕೋಟಿ ಅನುದಾನದಲ್ಲಿ ಬಿಎಸ್ಸಿ ನಸಿರ್ಂಗ್ ಕಾಲೇಜು, ಬಸ್ ನಿಲ್ದಾಣ, ಸಮುದಾಯ ಭವನ, ಪ್ರಜಾಸೌಧ, 6ಕೋಟಿ ರೂಪಾಯಿ ಅನುದಾನದಲ್ಲಿ ತಾಲೂಕು ಕ್ರೀಡಾಂಗಣ ಮಂಜೂರು ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ರಾಯರಡ್ಡಿ ಅವರಿಂದ ಆಗಿವೆ. 970ಕೋಟಿ ಅನುದಾನದಲ್ಲಿ ಕ್ಷೇತ್ರದ 36 ಕೆರೆ ತುಂಬಿಸುವ ಯೋಜನೆ ಕಾಂಗ್ರೆಸ್ ಸರ್ಕಾರದಿಂದ ಆಗಿದೆ.

ಇನ್ನೂ ಮೂರು ವರ್ಷಗಳ ಕಾಲಾವಧಿಯಲ್ಲಿ ಅಭಿವೃದ್ಧಿ ಸುನಾಮಿ ನಡೆಯಲಿದೆ, ಶಾಸಕ ಬಸವರಾಜ ರಾಯರಡ್ಡಿ ಅವರು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಬಸವೇಶ್ವರ, ಅಂಬೇಡ್ಕರ, ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣಕ್ಕೆ ಮುಂದಾಗಿದ್ದಾರೆ. 150ಕೋಟಿ ರೂ. ಅನುದಾನದಲ್ಲಿ ಕೌಶಲ ಕೇಂದ್ರ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಕ್ಷೇತ್ರದ ರಸ್ತೆಗಳು ರಾಜ್ಯಕ್ಕೆ ಮಾದರಿಯಾಗಿವೆ.ಕ್ಷೇತ್ರಕ್ಕೆ ಮಂಜೂರಾದ ಅಭಿವೃದ್ದಿ ಕಾಮಗಾರಿಗೆ ಸರಕಾರ ಆರ್ಥಿಕ ಅನುಮೋದನೆ ನೀಡಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಪ್ರಮುಖರಾದ ಹನುಮಂತಗೌಡ ಪಾಟೀಲ್, ಶೇಖರಗೌಡ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಮಹೇಶ ಹಳ್ಳಿ, ಸಂಗಣ್ಣ ತೆಂಗಿನಕಾಯಿ, ಡಾ.ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ರೇವಣಪ್ಪ ಸಂಗಟಿ, ಅಶೋಕ ತೋಟದ, ಹಂಪಯ್ಯಸ್ವಾಮಿ ಹಿರೇಮಠ, ಮಹಾಂತೇಶ ಗಾಣಿಗೇರ, ಹೇಮರಡ್ಡಿ ರಡ್ಡೇರ, ಸುಧೀರ ಕೊರ್ಲಹಳ್ಳಿ, ಮಲ್ಲಿಕಾರ್ಜುನ ಜಕ್ಕಲಿ, ಸಾವಿತ್ರಿ ಗೊಲ್ಲರ್, ಸಂಗಮೇಶ ಗುತ್ತಿ, ಭೀಮಣ್ಣ ಕೊಳಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net