

ಮಂಡ್ಯ: ನಗರದ ಹೊಳಲು ವೃತ್ತಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಅದರಂತೆ ನಾಲ್ಕೂವರೆ ಕೋಟಿ ರೂ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಬ್ರಾೃಂಡ್ ಮಂಡ್ಯ ನಿರ್ಮಾಣದ ಅಂಗವಾಗಿ ಹೊಳಲು ವೃತ್ತದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇದು ನಗರದ ಪ್ರಮುಖ ವೃತ್ತ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ಶೈಲಿ ಹಾಗೂ ವಿಭಿನ್ನ ವಿನ್ಯಾಸದಲ್ಲಿ ವೃತ್ತವನ್ನು ಹೈಟೆಕ್‌ಗೊಳಿಸಲಾಗುವುದು. ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಮಾತ್ರವಲ್ಲದೆ ಹೊಳಲು ವೃತ್ತದಿಂದ ಕಾಮನಗುಡಿ ವೃತ್ತದವರೆಗೂ ರಸ್ತೆಗೆ ಡಾಂಬರೀಕರಣ ಕೆಲಸ ನಡೆಯಲಿದೆ. ಈ ಭಾಗದ ವಾರ್ಡ್‌ನಲ್ಲಿ ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ಉದ್ಯಾನದ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಇದೇ ರೀತಿ ಎಲ್ಲ ವಾರ್ಡ್‌ನಲ್ಲಿಯೂ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಮುಡಾ ಅಧ್ಯಕ್ಷ ನಯೀಂ, ಸದಸ್ಯ ಕೃಷ್ಣ, ಪೌರಾಯುಕ್ತೆ ಪಂಪಶ್ರೀ ಇತರರಿದ್ದರು.
ಜನಸ್ನೇಹಿ ಕೇಂದ್ರ ಲೋಕಾರ್ಪಣೆ: ನಗರದ 14ನೇ ವಾರ್ಡ್‌ನಲ್ಲಿ ಪ್ರಾರಂಭಿಸಿರುವ ‘ರವಿಕುಮಾರ್ ಜನಸ್ನೇಹಿ ಕೇಂದ್ರ’ವನ್ನು ಶಾಸಕ ರವಿಕುಮಾರ್ ಗಣಿಗ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ, ಸ್ಥಳೀಯ ನಿವಾಸಿಗಳು ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ತೆರೆಯಲಾಗಿದೆ. ಮನೆಮನೆಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದ್ದಿಯಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ನಮ್ಮ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಲಿ ಎನ್ನುವ ಕಾಳಜಿಯಿಂದ ಹಾಗೂ ಗ್ಯಾರಂಟಿ ಯೋಜನೆಗಳು ಸಹ ತಲುಪಿಸಬೇಕೆಂದು ತಿಳಿಸಿದ್ದೇನೆ. ಅದರಂತೆ ಸಮರ್ಪಕವಾಗಿ ಕೇಂದ್ರದಲ್ಲಿ ಕೆಲಸ ನಡೆಯಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಂಘುನಂದನ್, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಕೃಷ್ಣ, ರುದ್ರಪ್ಪ, ದೊಡ್ಡಯ್ಯ, ಮಹೇಶ್, ರಾಮಚಂದ್ರು, ಶಿವಲಿಂಗಯ್ಯ, ಸಂತೋಷ್ ಇತರರಿದ್ದರು.