ಜಂಗಲ್ ಲಾಡ್ಜ್‌ನ ರೆಸಾರ್ಟ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ

30HDK00005
ಎಚ್.ಡಿ.ಕೋಟೆ ತಾಲೂಕಿನ ಕಾರಾಪುರ ಗ್ರಾಮದ ಕಬಿನಿ ರಿವರ್ ಲಾಡ್ಜ್‌ನಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಅನಿಲ್ ಕುಮಾರ್ ಭೂಮಿ ಪೂಜೆ ನೆರವೇರಿಸಿದರು. ಪ್ರಶಾಂತ್, ಕಾರ್ತಿಕ್, ಅನುಷಾ, ಇಬ್ರಾಹಿಂ, ಬಸವರಾಜಪ್ಪ, ವೀರೇಗೌಡ, ಸತೀಶ್‌ಗೌಡ ಇತರರು ಇದ್ದರು.
Published on

ಎಚ್.ಡಿ.ಕೋಟೆ: ರಾಜ್ಯದಲ್ಲಿನ ಎಲ್ಲ ಜಂಗಲ್ ಲಾಡ್ಜ್‌ಸ್ ಮತ್ತು ರೆಸಾರ್ಟ್‌ಗಳಲ್ಲಿ ಅಗತ್ಯ ಎಲ್ಲ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಗೊಳ್ಳಲಾಗುವುದು ಎಂದು ಶಾಸಕ ಅನಿಲ್‌ಕುಮಾರ್ ಭರವಸೆ ನೀಡಿದರು.

ತಾಲೂಕಿನ ಕಾರಾಪುರ ಗ್ರಾಮದ ಕಬಿನಿ ರಿವರ್ ಲಾಡ್ಜ್‌ನಲ್ಲಿ ಶನಿವಾರ 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಜಂಗಲ್ ರೆಸಾರ್ಟ್‌ಗೆ ಸಂಬಂಧಿಸಿದ 26 ಸಂಸ್ಥೆಗಳಿದ್ದು, ಎಲ್ಲ ಸಂಸ್ಥೆಗಳು ಸಹ ಲಾಭದಾಯಕವಾಗಿ ನಡೆಯುತ್ತಿವೆ. ಆದ್ದರಿಂದ 9 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಆರೋಗ್ಯ ಪರಿಹಾರ ನಿಧಿಗೆ ಸಂಸ್ಥೆಯಿಂದ ನೀಡಲು ತೀರ್ಮಾನಿಸಲಾಗಿದೆ. ಚೆಕ್ ಹಸ್ತಾಂತರದ ವೇಳೆ ಸಂಸ್ಥೆಯಲ್ಲಿ 600 ಮಂದಿ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಕಾಯಂ ಮಾಡಲು ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ಗೋಕರ್ಣ, ಮಂಗಳೂರು, ಗದಗ, ನಾಗರಹೊಳೆಯಲ್ಲಿ ಹೊಸದಾಗಿ ಜಾಗ ಖರೀದಿಸಲು ತೀರ್ಮಾನಿಸಲಾಗಿದ್ದು, ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಜಾಗವನ್ನು ಇಂದೇ ಪರಿಶೀಲನೆ ಮಾಡಲಾಗುತ್ತಿದೆ. ಉಳಿದ ಎಲ್ಲ್ಲ ನಿಗಮಗಳಿಗಿಂತ ನಮ್ಮ ನಿಗಮ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್‌ನಲ್ಲಿ 30 ವರ್ಷಗಳಿಂದ ಸರಿಯಾದ ರಸ್ತೆಗಳು ಇರಲಿಲ್ಲ. ಹೊಸ ಕಾಮಗಾರಿಗಳು ನಡೆದಿರಲಿಲ್ಲ, ಈಗ 4 ಲಕ್ಷ ರೂ. ವೆಚ್ಚದ ರಸ್ತೆ, 70 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ, ಸ್ಥಳೀಯ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಆಟಿಕೆಗಳ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.

ನಮ್ಮ ಜಂಗಲ್ ಲಾಡ್ಜ್‌ನಲ್ಲಿ ಸಿರಿ ಧಾನ್ಯಗಳ ಆಹಾರ ತಯಾರು ಮಾಡಲು ಅನುವು ದೊರೆತಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ಇದೆ ಎಂದರು.

ಕಬಿನಿ, ಬಂಡೀಪುರ ದಾಂಡೇಲಿಯಲ್ಲಿ ಅರಣ್ಯದ ಬಗ್ಗೆ ತರಬೇತಿ ಕೇಂದ್ರವನ್ನು ತೆರೆಯಲು ಸದನದಲ್ಲಿ ಒಪ್ಪಿಗೆ ದೊರತಿದ್ದು, ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದು ಎಂದರು.

45 ವರ್ಷಗಳಾಗಿರುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ರಾಜ್ಯದಲ್ಲಿ ಲಾಭದಾಯಕ ನಿಗಮಗಳಲ್ಲಿ ಒಂದಾಗಿದೆ. ಈ ರೆಸಾರ್ಟ್ ನಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲಾಗುತ್ತಿದೆ, ಶೇ.90ರಷ್ಟು ಮಂದಿ ಸ್ಥಳೀಯರೇ ಉದ್ಯೋಗ ಮಾಡುತ್ತಿದ್ದು, ಸಂಸ್ಥೆಯು ಲಾಭಾಂಶದಲ್ಲಿ ಬೆಳೆಯಲು ಇದೂ ಸಹ ಕಾರಣವಾಗಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಯುವರಾಜ್ ಸಹಾಯಕ ವ್ಯವಸ್ಥಾಪಕ ಕಾರ್ತಿಕ್, ಕಾರ್ಯಕಾರಿ ನಿರ್ದೇಶಕಿ ಅನುಷಾ, ಇಬ್ರಾಹಿಂ, ಬಸವರಾಜಪ್ಪ, ವೀರೇಗೌಡ, ಸತೀಶ್‌ಗೌಡ, ಬಾಲಯ್ಯ, ಬಸವರಾಜು, ಪರಶಿವಮೂರ್ತಿ, ರಾಜು ವಿಶ್ವಕರ್ಮ, ಮುಜಾಹಿದ್, ಸುಬ್ರಹ್ಮಣ್ಯ, ನಾಗನಹಳ್ಳಿ ಪ್ರದೀಪ್, ವನಸಿರಿ ಶಂಕರ್, ಅಶೋಕ್, ಮಲ್ಲೇಶ್, ಸಿದ್ದರಾಮು, ಪುಟ್ಟೇಗೌಡ, ಕನ್ನಡ ಪ್ರಮೋದ್, ದೇವರಾಜು, ಶೈಲೇಂದ್ರ, ಮುಳ್ಳೂರು ಮಂಜು, ಗುತ್ತಿಗೆದಾರರಾದ ಸ್ವರೂಪ್, ನಿಸರ್ಗ ತಜ್ಞ ಭೀಮಣ್ಣ, ಚೆಲುವರಾಜು, ಕಾರ್ತಿಕ್, ಲೋಕೇಶ್, ಕೃಷ್ಣಪ್ರಸಾದ್, ಶಿವರಾಜು, ಶಾಂತಕುಮಾರ್, ನಂಜುಂಡಯ್ಯ, ಬಸವರಾಜು, ಕೃಷ್ಣೇಗೌಡ, ಚಂದ್ರೇಗೌಡ, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net