8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

12ark3
ಅರಕಲಗೂಡು ತಾಲೂಕಿನ ಮರವಳಲು ಗ್ರಾಮದಲ್ಲಿ 2 ಲಕ್ಷ ರೂ. ವೆಚ್ಚದ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಭೂಮಿಪೂ ನೆರವೇರಿಸಿದರು. ಯೋಗೇಶ್, ದಿವಾಕರ್‌ಗೌಡ ಇತರರಿದ್ದರು. 
Published on

ಅರಕಲಗೂಡು: ತಾಲೂಕಿನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾಹಿತಿ ನೀಡಿದರು.

ತಾಲೂಕಿನ ಮರವಳಲು ಗ್ರಾಮದಲ್ಲಿ 2 ಲಕ್ಷ ರೂ. ವೆಚ್ಚದ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬಸವನಹಳ್ಳಿ ಗಂಜಲಗೂಡು ಗ್ರಾಮದ ಸಮುದಾಯ ಭವನಕ್ಕೆ 3 ಲಕ್ಷ ರೂ., ಗಂಜಲಗೂಡು ಲಕ್ಷ್ಮೀ ದೇವಸ್ಥಾನಕ್ಕೆ 3 ಲಕ್ಷ ರೂ., ಬೈಚನಹಳ್ಳಿ ಸಿದ್ದಿವಿನಾಯಕ ದೇವಸ್ಥಾನಕ್ಕೆ 2 ಲಕ್ಷ ರೂ., ಸಮುದಾಯ ಭವನಕ್ಕೆ 3 ಲಕ್ಷ ರೂ., ಹುಲ್ಲಂಗಾಲ ಕಿಕ್ಕೇರಮ್ಮ ಹೊನ್ನವಳ್ಳಿರಾಯ ದೇವಸ್ಥಾನಕ್ಕೆ 2.50 ಲಕ್ಷ ರೂ., ಮಾರಮ್ಮ ದೇವಸ್ಥಾನಕ್ಕೆ 2 ಲಕ್ಷ ರೂ. ಹಾಗೂ 4 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್, ಬೈಚನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಚಂದ್ರಶೇಖರ್, ಉಪಾಧ್ಯಕ್ಷೆ ತುಳಸಿ ಚಂದ್ರಶೇಖರ್, ಕಾರ್ಯದರ್ಶಿ ಮಹಾದೇವ, ಮುಖಂಡರಾದ ಗಾಂಧಿನಗರ ದಿವಾಕರ್, ರಘು, ರಾಜಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net