

ಸೂಲಿಬೆಲೆ: ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 2.50 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿ ಆದ್ಯತೆ ನೀಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಹಸಿಗಾಳ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಸಬಾ ಹೋಬಳಿ ವ್ಯಾಪ್ತಿಯ ಲಕ್ಕೊಂಡಹಳ್ಳಿ, ವಾಬಸಂದ್ರ, ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಹಸಿಗಾಳ, ಕಮ್ಮಸಂದ್ರ, ಯನಗುಂಟೆ, ಸಾದಪ್ಪನಹಳ್ಳಿ ಹಾಗೂ ಗಿಡ್ಡಪ್ಪನಹಳ್ಳಿ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಮುಖ್ಯಮಂತ್ರಿ ವಿಶೇಷ ಅನುದಾನಡಿ ನಡೆಯಲಿವೆ ಎಂದರು.
ಗಿಡ್ಡಪ್ಪನಹಳ್ಳಿಯ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಪಿಯು ಕಾಲೇಜು ಸಂಕೀರ್ಣ ನಿರ್ಮಾಣಕ್ಕೆ 9.55 ಕೋಟಿ ಅನುದಾನ ದೊರೆತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣದ ಕಾರ್ಯಕ್ರಮದಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಪಂ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ನಲ್ಲಿ ನಡೆಸಲು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದ್ದು, ಇದರಿಂದ ಚುನಾವಣಾಯಲ್ಲಾಗುವ ಅಕ್ರಮ ತಡೆಯಬಹುದಾಗಿದೆ. ಜತೆಗೆ ಚುನಾವಣಾ ಪಟ್ಟಿಯನ್ನೂ ಸಮರ್ಪಕವಾಗಿ ಮಾರ್ಪಾಡು ಮಾಡಲು ಒತ್ತಾಯಿಸಲಾಗಿದೆ ಎಂದರು. ಅಲ್ಪಸಂಖ್ಯಾತರ ಶೈಕ್ಷಣಿಕ ಹಿತದೃಷ್ಟಿಯಿಂದ ಉನ್ನತ ವಿದ್ಯಾಭ್ಯಾಸದ ಉದ್ದೇಶದಿಂದ ಪಿಯು ಕಾಲೇಜು ಸಂಕೀರ್ಣವನ್ನು ಪ್ರತ್ಯೇಕವಾಗಿ 9.55 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿದೆ. ಇದರಿಂದ ಅಲ್ಪಸಂಖ್ಯಾತರಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದು ಶಾಸಕ ಶರತ್ಬಚ್ಚೇಗೌಡ ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾಧ್, ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಗ್ರಾಪಂ ಅಧ್ಯೆ ಪದ್ಮಾವತಿ, ಉಪಾಧ್ಯೆ ಪಾರ್ವತಮ್ಮ, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀನಿವಾಸಮೂರ್ತಿ, ನಿರ್ದೇಶಕ ಪಿಳ್ಳೇಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ತಾಪಂ ಮಾಜಿ ಸದಸ್ಯ ಲಾರಿಕೃಷ್ಣಪ್ಪ, ಕಮ್ಮಸಂದ್ರ ಪಿಳ್ಳೇಗೌಡ, ಅಂಬರೀಷ್, ಮುನಿರಾಜು, ವಸಂತಕುಮಾರ್, ದೇವರಾಜ್, ಯನಗುಂಟೆ ರಮೇಶ್, ಶ್ರೀನಿವಾಸ್, ನವೀನ್, ತಿಮ್ಮರಾಯ, ಅತ್ತಿಬೆಲೆ ನಾಗೇಶ್, ಬಸವರಾಜಪ್ಪ ಇತರರು ಇದ್ದರು.