

ಹಾರೂಗೇರಿ: ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 72.70 ಲಕ್ಷ ರೂ. ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಬಿರಾದಾರ ಹೇಳಿದರು.
ಇಲ್ಲಿನ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 12ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿ, 1 ಕೋಟಿ ರೂ. ಷೇರು ಬಂಡವಾಳ, 1.95 ಕೋಟಿ ರೂ. ನಿಧಿ ಹಾಗೂ ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುವುದು ಎಂದರು.
ಶರಣವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಸಿ.ಆರ್.ಗುಡಸಿ ಹಾಗೂ ವಿ.ಎಸ್.ಮಾಳಿ ಮಾತನಾಡಿದರು. ಸಂಘದ ಅಧ್ಯಕ್ಷೆ ಮಹಾದೇವಿ ಬಿರಾದಾರ, ಉಪಾಧ್ಯಕ್ಷ ಮುರಿಗೆಪ್ಪ ಗದಗ, ನಿರ್ದೇಶಕರಾದ ಮಲ್ಲಪ್ಪ ಬಿರಾದಾರ, ರಾಮಪ್ಪ ಗುರವ, ರವೀಂದ್ರ ಬಿರಾದಾರ, ಡಾ.ರಮೇಶ ಕೊಪ್ಪಳ, ಡಾ.ಪುಷ್ಪ ಪಾಟೀಲ, ಸಂಜೀವ ತಿಗಣಿ, ವೆಂಕಟೇಶ ಬಿರಾದಾರ, ಶಂಕರ ಮಿರಜಕರ ಇತರರಿದ್ದರು.