ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು

6kudachi1
Published on

ಕುಡಚಿ: ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಚಿಂಚಲಿ ಗ್ರಾಮದ ಉಪ್ಪರವಾಡಿ ತೋಟದಲ್ಲಿ ಶ್ರೀ ಯಡಿ ಮಾಯಕ್ಕ ದೇವಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ. ವೆಚ್ಚದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.

ವಕೀಲ ಸುಭಾಷ ರೆಂಟೆ ಮಾತನಾಡಿ, ದೇವಸ್ಥಾನ ಅಭಿವೃದ್ಧಿಗೆ ಜಾರಕಿಹೊಳಿ ಕುಟುಂಬದ ಕೊಡುಗೆ ಅಪಾರ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೀಡಿದ ಶಿಾರಸು ಪತ್ರ ನೀಡಿರುವ ಹಿನ್ನೆಲೆ ಮುಜರಾಯಿ ಇಲಾಖೆಯಿಂದ 10 ಲಕ್ಷ ರೂ. ಮಂಜೂರಾಗಿದೆ ಎಂದರು.

ತಹಸೀಲ್ದಾರ್ ಸುರೇಶ ಮುಂಜೆ, ಕವಿತಾ ಯಡ್ರಾಂವೆ, ರುಕ್ಮೀಣಿ ಹಾರೂಗೇರಿ, ರಮೇಶ ಹಾರೂಗೇರಿ, ನಿರ್ಮಲಾ ಪಾಟೀಲ, ಶಿವಾನಂದ ಪಾಟೀಲ, ಯಲ್ಲಪ್ಪ ರೆಂಟಿ,

ವಾಮಣ ಹಟ್ಟಿಮನಿ, ಗೋವಿಂದ ಪವಾರ, ಪ್ರವೀಣ ಹುಕ್ಕೇರಿ, ಡಾ.ಮಾರುತಿ ರೆಂಟಿ, ಕುಮಾರ ಖೋತ, ಪರುಶುರಾಮ ಖೋತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net